ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೌರವಾನ್ವಿತ ರಾಷ್ಟ್ರಪತಿಗಳ ಸಂಸತ್ ಭಾಷಣದ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿಕೆ ಖಂಡನೀಯ. ದೇಶದ ಪ್ರಥಮ ಪ್ರಜೆ ಕುರಿತು ಸೋನಿಯಾ ಗಾಂಧಿ ಪರಿವಾರವು ಕೀಳು ಅಭಿರುಚಿಯ ಹೇಳಿಕೆಯನ್ನು ನೀಡಿದೆ. ಬುಡಕಟ್ಟು ಹಿನ್ನೆಲೆಯನ್ನು ಹೊಂದಿರುವ ಮುರ್ಮು ಅವರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಬಿಜೆಪಿ ಹರಿಹಾಯ್ದಿದೆ.
ಕಾಂಗ್ರೆಸ್ ಪಕ್ಷವು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದವರ ಬೆಳವಣಿಗೆಯನ್ನು ಸಹಿಸದೆ, ಪ್ರತಿ ಹೆಜ್ಜೆಯಲ್ಲಿ ಅವಮಾನಿಸುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಹಿಡಿದು ದೇಶದ ಪ್ರಥಮ ಪ್ರಜೆ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ತನಕ ನಕಲಿ ಗಾಂಧಿ ಪರಿವಾರ ಅವಮಾನಿಸುತ್ತಾ ಬಂದಿದೆ. ಈ ರೀತಿಯ ಹೇಳಿಕೆ ಬುಡಕಟ್ಟು ಜನರಿಗೆ ಮಾಡಿದ ಅಪಮಾನ, ಇದಕ್ಕಾಗಿ ಕಾಂಗ್ರೆಸ್ ಬೇಷರತ್ ಕ್ಷಮೆ ಕೋರಬೇಕು ಎಂದು ಬಿಜೆಪಿ ಆಗ್ರಹ ಮಾಡಿದೆ.