ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಭ್ರಷ್ಟಾಚಾರ ಗ್ಯಾರಂಟಿ. ಪ್ರತಿ ತಿಂಗಳು ಗ್ಯಾರಂಟಿ ಕೊಡುತ್ತೇವೆ ಎಂದು ಮಾತು ತಪ್ಪಿರುವ ದಿವಾಳಿ ಕಾಂಗ್ರೆಸ್ ಸರ್ಕಾರ, 3-4 ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ದುಡ್ಡು ಕೊಟ್ಟಿಲ್ಲ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಈಗ ಗೃಹ ಲಕ್ಷ್ಮೀಯರ ಹೆಸರಲ್ಲಿಯೂ ಸಾವಿರಾರು ಕೋಟಿ ರೂ. ಹಣವನ್ನು ಸದ್ದಿಲ್ಲದೇ ನುಂಗಿ ಹಾಕಲು ಹೊರಟಿದೆ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ.
ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನೇ ಫಲಾನುಭವಿಗಳ ಖಾತೆಗೆ ಜಮೆ ಮಾಡಿಲ್ಲ. ಆದರೂ “ತಾಂತ್ರಿಕ ಸಮಸ್ಯೆ ಮಿನಿಸ್ಟರ್” ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಣ ಬಿಡುಗಡೆಯಾಗಿದೆ ಎಂದು ಸದನಕ್ಕೆ ತಪ್ಪು ಮಾಹಿತಿ ನೀಡಿ ಯಾಮಾರಿಸಿದ್ದಾರೆ.
ಇದರ ಉದ್ದೇಶ ಹೇಗಾದರೂ ಸರಿ ಹಣ ಲೂಟಿ ಹೊಡೆಯುವುದೊಂದೇ ಕಾಂಗ್ರೆಸ್ ಪಕ್ಷದ ಪರಮ ಗುರಿ ಆಗಿದೆ ಎಂದು ಜೆಡಿಎಸ್ ದೂರಿದೆ.

