ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಳ್ಳುಗಳನ್ನು ಸೃಷ್ಟಿಸುವುದು ಹಾಗೂ ಸುಳ್ಳುಗಳನ್ನು ಹಬ್ಬಿಸುವುದು ಕಾಂಗ್ರೆಸ್ಸಿಗರಿಗೆ ಚೆನ್ನಾಗಿಯೇ ಸಿದ್ಧಿಸಿದೆ! ಕಾಂಗ್ರೆಸ್‌ಭಾರತವನ್ನು 60 ವರ್ಷ ಆಳಿದ್ದು ಸಹ ಸುಳ್ಳುಗಳಿಂದಲೆ ಎಂಬುದು ಇತಿಹಾಸದಿಂದ ನಮಗೆ ಅರಿವಾಗುತ್ತದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕುವ ಕೋಟಾದಡಿ ಮಂತ್ರಿಗಿರಿ ಪಡೆದಿರುವ ಜಮೀರ್ ಅಹಮದ್ ಖಾನ್ ಅವರು ಸಚಿವ ಸ್ಥಾನ ನಿಭಾಯಿಸಲು ಸಂಪೂರ್ಣ ಅನರ್ಹರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ! ಎಂದು ಬಿಜೆಪಿ ಆರೋಪಿಸಿದೆ.
ತಾವು ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದೇವೆ ಎಂಬುದನ್ನು ನಿರೂಪಿಸಲು ಹಾಗೂ ಸದಾ ಸುದ್ದಿಯಲ್ಲಿರಬೇಕೆಂಬ ಹಪಾಹಪಿಗಾಗಿ ಮನಬಂದಂತೆ ಸುಳ್ಳು ಹೇಳುವುದನ್ನು ಜಮೀರ್ ಅಹಮದ್ ಕರಗತ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಹರಿಹಾಯ್ದಿದೆ.
ಜಿ.ಎಸ್.ಟಿ. ತೆರಿಗೆ ಹಾಗೂ ಆಡಳಿತದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಸಚಿವ ಜಮೀರ್‌ಅಹಮದ್‌ಅವರು ಪಿಎಂ ಆವಾಸ್‌ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ 1.5 ಲಕ್ಷದಲ್ಲಿ 1.38 ಲಕ್ಷವನ್ನು ಜಿ.ಎಸ್.ಟಿ. ಹೆಸರಿನಲ್ಲಿ ಕಡಿತ ಮಾಡಲಾಗುತ್ತದೆ ಎಂದು ಹೇಳಿರುವುದು ಅಪ್ಪಟ ಸುಳ್ಳು ಎಂದು ಬಿಜೆಪಿ ದೂರಿದೆ.
ಪಿಎಂ ಆವಾಸ್‌ಯೋಜನೆಯಲ್ಲಿ ಕೈಗೆಟಕುವ ವಸತಿ ವಿಭಾಗವಿದ್ದು, ಈ ಯೋಜನೆಯಡಿ ಮಂಜೂರಾಗುವ ವಸತಿ ಯೋಜನೆಗಳಿಗೆ ಶೇ.1 ರಷ್ಟು ಮಾತ್ರ ಜಿ.ಎಸ್.ಟಿ. ವಿಧಿಸಲಾಗುತ್ತದೆ. ಈ ಸಂಬಂಧ ಏಪ್ರಿಲ್2019 ರಂದೇ ಜಿ.ಎಸ್.ಟಿ. ಕೌನ್ಸಿಲ್‌ಸಮಿತಿ ಆದೇಶ ಪ್ರಕಟಿಸಿದೆ.
ಈ ಜಿ.ಎಸ್.ಟಿ. ದರ ಜಾರಿಗೆ ಬರುವ ಮುನ್ನ ಪಿಎಂ ಆವಾಸ್‌ಯೋಜನೆಯಡಿ ನಿರ್ಮಾಣವಾಗುವ ಮನೆಗಳಿಗೆ ಶೇ.12 ರಷ್ಟು ಜಿ.ಎಸ್.ಟಿ. ವಿಧಿಸಲಾಗುತ್ತಿತ್ತು, ಆ ಬಳಿಕ 2022 ರಲ್ಲಿ ಕ್ರೆಡಿಟ್‌ಲಿಂಕ್ಡ್‌ಸಬ್ಸಿಡಿ ಸ್ಕೀಂ ಯೋಜನೆ ಜಾರಿಯಾದ ಬಳಿಕ ಜಿ.ಎಸ್.ಟಿ. ದರ ಶೇ. 8 ಕ್ಕೆ ಇಳಿಯಿತು. ಪ್ರಸ್ತುತ ಕೈಗೆಟುಕುವ ವಸತಿ ಯೋಜನೆಗಳಲ್ಲಿ ವಿಧಿಸಲಾಗುವ ಜಿ.ಎಸ್.ಟಿ. ಕೇವಲ 1% ಮಾತ್ರ ಎಂದು ಬಿಜೆಪಿ ತಿಳಿಸಿದೆ.
ಇನ್ನು ಸಚಿವ ಜಮೀರ್ ಅಹಮದ್ ಖಾನ್ ಅವರು ತಮ್ಮ ಶಾಲಾ ದಿನಗಳಲ್ಲಿ ಗಣಿತವನ್ನು ಸಹ ಉರ್ದು ಮಾಧ್ಯಮದಲ್ಲಿ ಅಭ್ಯಸಿಸಿದ್ದಾರೆ ಎಂದೆನಿಸುತ್ತದೆ.
1.5 ಲಕ್ಷಕ್ಕೆ 18 ಪರ್ಸೆಂಟ್‌ಜಿ.ಎಸ್.ಟಿ. ಎಂದರೆ 27 ಸಾವಿರವಾಗುತ್ತದೆ. ಆದರೆ ಸಚಿವರು 1.5 ಲಕ್ಷಕ್ಕೆ 1.38 ಲಕ್ಷ ಜಿ.ಎಸ್.ಟಿ. ಹಣ ಕಡಿತವಾಗಿದೆ ಎಂದು ಹೇಳಿರುವುದು ಯಾವ ಕ್ಯಾಲ್ಕುಲೇಟರ್ ಆಧಾರದಲ್ಲಿ ಎಂಬುದನ್ನು ಅವರೇ ತಿಳಿಸಬೇಕು ಎಂದು ಬಿಜೆಪಿ ಆಗ್ರಹ ಮಾಡಿದೆ.
ಬಡವರಿಗೆ ಪಕ್ಕಾ ಮನೆ, ಕುಡಿಯಲು ಶುದ್ಧ ನೀರು, ಉಜ್ವಲಾ ಯೋಜನೆಯಡಿ ಹೊಗೆ ಮುಕ್ತ ಅಡುಗೆ ಮನೆ, ಪ್ರತಿ ಮನೆಗೂ ವಿದ್ಯುತ್‌ಸಂಪರ್ಕ, ಆಯುಷ್ಮಾನ್‌ಆರೋಗ್ಯ ವಿಮೆ, ಗರೀಬ್‌ಕಲ್ಯಾಣ್‌ಯೋಜನೆಯಡಿ ದವಸ-ಧಾನ್ಯ ಸೇರಿದಂತೆ ಬಡವರ ಕಲ್ಯಾಣಕ್ಕೆ ಪ್ರಧಾನಿ ಮೋದಿ ಸರ್ಕಾರ ಅವಿಶ್ರಾಂತವಾಗಿ ಶ್ರಮಿಸುತ್ತಿದೆ. ಆದರೆ ಕಾಂಗ್ರೆಸ್ಸಿಗರು ಬಡವರ ಕಲ್ಯಾಣವನ್ನು ಕಡೆಗಣಿಸಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮನಬಂದಂತೆ ಸುಳ್ಳುಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.