ಡಿಕೆಶಿ ಸಿಎಂ ಆಗಲಿ ಎಂದು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಸೇವೆ ಸಲ್ಲಿಸಿದ ಅಭಿಮಾನಿಗಳು

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಡಿ.ಕೆ.ಶಿವಕುಮಾರ್​ ಅವರನ್ನು ಮುಖ್ಯಮಂತ್ರಿಯಾಗಿ ಕಾಣಬೇಕೆಂದು ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಬೆಳ್ಳಿರಥ ಎಳೆದು ವಿಶೇಷ ಸೇವೆ ಸಲ್ಲಿಸಿ ಪ್ರಾರ್ಥಿಸಿದರು.

ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವನ್ನು ಅಭಿಮಾನಿಗಳು ರಥದ ಮುಂಭಾಗದಲ್ಲಿಟ್ಟು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

- Advertisement - 

ಕೆಪಿಸಿಸಿ ಸದಸ್ಯ ಜಿ.ಶ್ರೀನಾಥ್​​ ಬಾಬು ಈ ಸಂದರ್ಭದಲ್ಲಿ ಮಾತನಾಡಿ, ಡಿ.ಕೆ.ಶಿವಕುಮಾರ್​​​​ ಅವರ ಆಡಳಿತ ವೈಖರಿ, ಅಭಿವೃದ್ಧಿ ದೃಷ್ಟಿಕೋನ ಮತ್ತು ಜನಪರ ಕೆಲಸಗಳು ಅವರನ್ನು ಪರಿಣಾಮಕಾರಿ ನಾಯಕನನ್ನಾಗಿ ತೋರಿಸಿವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ 136 ಸ್ಥಾನಗಳ ಗೆಲುವಿನಲ್ಲಿ ಅವರ ಪರಿಶ್ರಮ ಮಹತ್ತರ ಪಾತ್ರವಹಿಸಿದೆ ಎಂದು ಹೇಳಿದರು. ಪ್ರಸ್ತುತ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಹೈಕಮಾಂಡ್ ಸಿಎಂ ಬದಲಾವಣೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಲ್ಲಿ,

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿಯಾಗಿ ನೇಮಿಸಬೇಕು ಎಂದು ಆಗ್ರಹ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್​​ ಅವರಿಗೆ ಸಿಎಂ ಆಗುವ ಅವಕಾಶ ನೀಡಬೇಕೆಂಬುದು ನಮ್ಮ ಮನವಿ ಎಂದು ಹೇಳಿದರು.

- Advertisement - 

ಇತ್ತೀಚೆಗೆ ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ಡಿ.ಕೆ.ಶಿವಕುಮಾರ್​ ಅವರು ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ದುಡಿದಿರುವ ಡಿ.ಕೆ.ಶಿವಕುಮಾರ್​ ಅವರಿಗೆ ಒಂದು ಅವಕಾಶ ಸಿಗಬೇಕು ಎನ್ನುವಂಥದ್ದು ಎಲ್ಲರ ಒಕ್ಕೊರಲಿನ ಕೂಗು. ಎರಡೂವರೆ ವರ್ಷಗಳ ನಂತರ ಡಿ.ಕೆ. ಶಿವಕುಮಾರ್​ ಅವರು ಮುಖ್ಯಮಂತ್ರಿಯಾಗಬೇಕು ಎನ್ನುವ ಅಭಿಪ್ರಾಯ ನಮಗೂ ಇದೆ.

ಮತ್ತು ರಾಜ್ಯದ ನಮ್ಮ ಭಕ್ತಾದಿಗಳಿಗೂ ಇದೆ ಎಂದು ತಮ್ಮ ಅಭಿಲಾಷೆ ತಿಳಿಸಿದ್ದರು. ಹಾಸನದ ಕುಂದೂರು ಮಠದಲ್ಲಿ ನಡೆದ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿದ ನಂತರ ಶ್ರೀಗಳು ಈ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದಾಗಿದೆ. ಇಂದು ಅಭಿಮಾನಿಗಳು ಚಾಮುಂಡಿ ಬೆಟ್ಟದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಪ್ರಾರ್ಥಿಸಿದರು.

ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್​ ಅಭಿಮಾನಿ ಬಳಗದ ಜಿ.ರಾಘವೇಂದ್ರ, ಹರೀಶ್ ಗೌಡ, ಎಸ್.ಎನ್.ರಾಜೇಶ್, ಶಶಾಂಕ್ ಗೌಡ, ಚಂದ್ರು, ಕಿರಣ್, ಪ್ರಸನ್ನ ಕುಮಾರ್​ (ಅಪ್ಪಿ), ದಿನೇಶ್, ವಿನೋದ್, ಮಾತ್ಯುಸ್, ಹರೀಶ್ ನಾಯ್ಡು, ಶೈಲಾ, ಶೋಭಾ ರಾವ್, ಸುಜಾತ ಭಟ್, ಆಶಾ, ಸುಂದರಿ, ರವಿ ಕಲಾ, ಸಹಿಗೀತಾ, ದೀಪ ಸೇರಿದಂತೆ ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದರು.

 

 

Share This Article
error: Content is protected !!
";