ಫ್ಯಾಂಟಸಿ‌ “ಡಿಂಕು” ಸಧ್ಯದಲ್ಲೇ ಬಿಡುಗಡೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ನೆಲ ಮಹೇಶ್ ನೇವಿ ಮಂಜು ಫಿಲಂಸ್ ಬ್ಯಾನರ್ ಅಡಿ
, ನೆಲ ಮಹೇಶ್ ಹಾಗೂ ನೇವಿ ಮಂಜು ಅವರು ನಿರ್ಮಿಸುತ್ತಿರುವ ಚಿತ್ರ ಡಿಂಕು. ನೆಲ ನರೆಂದ್ರಬಾಬು ಅವರ ಸಹೋದರನೂ ಆದ ನೆಲ ಮಹೇಶ್ ಈಗಾಗಲೇ ಠಪೋರಿ, ಶಿವಾನಿ ಸೇರಿದಂತೆ  10-12 ಚಿತ್ರಗಳನ್ನು ನಿರ್ಮಿಸಿದ್ದು, ಸೀರಿಯಲ್ ಗಳನ್ನು ಸಹ  ಮಾಡಿದ್ದಾರೆ.

ನೇವಿ ಮಂಜು ಸಹ ಅರಳಿದ ಹೂಗಳು, ಜಿಗ್ರಿ ದೋಸ್ತ್ ಸೇರಿ 3  ಚಿತ್ರಗಳನ್ನು ನಿರ್ಮಿಸಿದ್ದು, ಇದು ಅವರ 4ನೇ ಚಿತ್ರ. ವಿಭಿನ್ನ  ಜಾನರ್  ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ರಾಜೇಶ್ ಮೂರ್ತಿ ಅವರ ನಿರ್ದೇಶನದ ಸಸ್ಪೆನ್ಸ್, ಫ್ಯಾಂಟಸಿ ಜಾನರ್  ಚಿತ್ರವಿದು.  ಡಿಂಕು ಅವರ ನಿರ್ದೇಶನದ ಹತ್ತನೇ ಚಿತ್ರ. 

 ರಾಜೇಶ್ ಮೂರ್ತಿ ಅವರ ಪುತ್ರ ಯಶಸ್ವಾ ಈ ಚಿತ್ರದ ನಾಯಕನಾಗಿ ನಟಿಸಿದ್ದುಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡಾ ರಚಿಸಿದ್ದಾರೆ. ಪಪ್ಪೆಟ್ ಷೋ ನಡೆಸುವ ಯುವತಿ ಹಾಗೂ ಆಕೆಯ ಗೊಂಬೆ ಡಿಂಕು  ಸುತ್ತ ನಡೆಯುವ ಘಟನೆಗಳೇ ಈ ಚಿತ್ರದ  ಕಾನ್ಸೆಪ್ಟ್. ಅಗ್ನಿಲೋಕ್ ನಂತರ ಯಶಸ್ವಾ ನಟನೆಯ ಎರಡನೇ ಚಿತ್ರವಿದು.

ಅಲ್ಲದೆ ಯುವನಟಿ ಸನ್ನಿಧಿ ಚಿತ್ರದ  ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತಿಮ ಹಂತ ತಲುಪಿದ್ದು, ಫೈನಲ್ ಮಿಕ್ಸಿಂಗ್ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಸೆನ್ಸಾರ್ ಮನೆಗೆ ಹೋಗಲು ಚಿತ್ರ ಸಿದ್ದವಾಗಲಿದೆ.  ಚಿತ್ರದಲ್ಲಿ ಡಿಂಕು ಹೆಸರಿನ ಗೊಂಬೆ ಮಾತಾಡುತ್ತದೆ. ಸಸ್ಪೆನ್ಸ್  ಜೊತೆಗೆ ಕಾಮಿಡಿ ಅಂಶಗಳನ್ನು ಡಿಂಕು ಚಿತ್ರ  ಒಳಗೊಂಡಿದೆ. 

   ‌‌ ಡಿಂಕು ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದುಚಿತ್ರದ ಎಡಿಟಿಂಗ್ ಕಾರ್ಯ ಮುಗಿದು ಡಬ್ಬಿಂಗ್  ಕೊನೆಯ ಹಂತದಲ್ಲಿದೆ. ಕನ್ನಡದ ಹಿರಿಯ ನಿರ್ಮಾಪಕ ಹಾಗೂ  ಛಾಯಾಗ್ರಾಹಕರೂ ಆಗಿದ್ದ ಹೆಚ್.ಎಂ.ಕೆ. ಮೂರ್ತಿ ಅವರ ಮೊಮ್ಮಗನೂ ಆದ ಯಶಸ್ವಾ ಅವರು ಈಗಾಗಲೇ ಅಗ್ನಿಲೋಕ ಎಂಬ ಚಿತ್ರದಲ್ಲಿ ನಟಿಸೋ  ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 

ಡಿಂಕು  ಅವರ ಅಭಿನಯದ ಎರಡನೇ ಚಿತ್ರ. ಇನ್ನು ಈ ಚಿತ್ರದಲ್ಲಿ 4 ಫೈಟ್ಸ್ ಇದ್ದು ಗಿರೀಶ್ ಎ.ಪಿ. ಅವರು  ಕಂಪೋಜ್ ಮಾಡುತ್ತಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ನಿತೀಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ‌.   ಸೆನ್ಸಾರ್ ಮುಗಿದ ಕೂಡಲೇ ಚಿತ್ರವನ್ನು ರಿಲೀಸ್ ಮಾಡೋ ಯೋಚನೆಯಿದೆ ಎಂದು ನಿರ್ಮಾಪಕರಾದ ನೆಲ ಮಹೇಶ್ ಹಾಗೂ ನೇವಿ ಮಂಜು ಅವರುಗಳು ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";