ಅಗ್ನಿಶಾಮಕ ಪ್ರಮುಖ ಸದಾಶಿವಯ್ಯ ಬೀಳ್ಕೊಡುಗೆ

News Desk

ಅಗ್ನಿಶಾಮಕ ಪ್ರಮುಖ ಸದಾಶಿವಯ್ಯ ಬೀಳ್ಕೊಡುಗೆ
ಚಂದ್ರವಳ್ಳಿ ನ್ಯೂಸ್, ತುಮಕೂರು:
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಪ್ರಮುಖ ಅಗ್ನಿಶಾಮಕರಾದ ಸದಾಶಿವಯ್ಯ ಬಿ.ಎಂ. ಅವರಿಗೆ ಸಿಬ್ಬಂದಿಗಳು ಮತ್ತು ಅಧಿಕಾರಿ ವರ್ಗದವರು ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.

ತುಮಕೂರಿನ ಅಗ್ನಿಶಾಮಕ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ್ ಅವರು,

ಸದಾಶಿವಯ್ಯನವರು ತುಮಕೂರಿನ ಅಗ್ನಿಶಾಮಕ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. 1996ರಲ್ಲಿ ಇಲಾಖೆಗೆ ಸೇರ್ಪಡೆಯಾಗಿ 2024ರ ವರೆಗೆ ಸುದೀರ್ಘವಾಗಿ ತಮ್ಮ ಕರ್ತವ್ಯವನ್ನು ರಾಜ್ಯದ ಹಲವಾರು

ಅಗ್ನಿಶಾಮಕ ಠಾಣೆಗಳಲ್ಲಿ ನಿರ್ವಹಿಸಿ ಇದೀಗ 60 ವರ್ಷ ಪೂರ್ಣಗೊಂಡಿದ್ದು, ವಯೋ ನಿವೃತ್ತಿ ಹೊಂದಿದ್ದಾರೆ. ಹೀಗಾಗಿ ಅವರಿಗೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಹಿತೈಷಿಗಳು ಬೀಳ್ಕೊಡುಗೆ ನೀಡಿದ್ದೇವೆ ಎಂದರು.
ಪ್ರಕೃತಿಗೆ ಸವಾಲು ಎಸಗುವ ಅನೇಕ

ಕಾರ್ಯಗಳಲ್ಲಿ ಸದಾಶಿವಯ್ಯ ಅವರು ಭಾಗಿಯಾಗಿ ಅದರಲ್ಲಿ ಯಶಸ್ವಿ ಕೂಡ ಆಗಿ ಅನೇಕ ಪದಕಗಳನ್ನು ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ. ತುಂಬಾ ಪ್ರಾಮಾಣಿಕ ಮತ್ತು ದಕ್ಷ ಹಾಗೂ ಶ್ರಮ ಜೀವಿಯಾಗಿದ್ದಾರೆ. ಯಾವುದೇ ಅಧಿಕಾರಿ ಸಿಬ್ಬಂದಿಗಳಿಗೆ ಎಂದು ಕೂಡ ವಿರೋಧವಾಗಿ ಮಾತನಾಡಿದವರಲ್ಲ,

ನಡೆದುಕೊಂಡವರಲ್ಲ. ಅವರ ಆದೇಶಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಇವರ ಮುಂದಿನ ಜೀವನವೂ ಸುಖಕರವಾಗಿರಲಿ ಎಂದು ಈ ಮೂಲಕ ನಾವೆಲ್ಲಾ ಸಿಬ್ಬಂದಿಗಳು ಶುಭ ಹಾರೈಸುತ್ತೇವೆ ಎಂದು ಹೇಳಿದರು.

ವಯೋ ನಿವೃತ್ತರಾದ ಪ್ರಮುಖ ಅಗ್ನಿಶಾಮಕರಾದ ಸದಾಶಿವಯ್ಯ ಬಿ.ಎಂ. ಮಾತನಾಡಿ, ಇಲಾಖೆಗೆ ನಾವೇನು ಕೂಡ ತಂದು ಕೊಡಲಿಲ್ಲ. ಆದರೆ ಇಲಾಖೆ ಇಷ್ಟು ವರ್ಷಗಳಲ್ಲಿ ನಮಗೆ ಎಲ್ಲವನ್ನು ಕೂಡ ನೀಡಿದೆ. ಇಷ್ಟು ವರ್ಷಗಳ ಕಾಲ ನಮಗೆ ಅನ್ನ ನೀಡಿದ ಇಲಾಖೆಗೆ ನಾನೇ ಧನ್ಯವಾದ ಹೇಳುತ್ತೇನೆ. ಇಷ್ಟು ವರ್ಷಗಳು ಬೆಳಿಗ್ಗೆಯಾದರೆ ಸಾಕು ನೇರವಾಗಿ ಅಗ್ನಿಶಾಮಕ ಠಾಣೆಗೆ ಬರುತ್ತಿದ್ದೆವು. ಆದರೆ ಇದೀಗ ಹಾಗೆ ಆಗುವುದಿಲ್ಲ. ನಾವು ಇಲ್ಲಿಗೆ ಬಂದು ಮಾಡುತ್ತಿದ್ದಂತಹ ಸೇವೆಗಳನ್ನು ಹೊರಗೆ ಇದ್ದು ಕೂಡ ಮಾಡಬಹುದು. ಅಲ್ಲೂ ಕೂಡ ಉತ್ತಮವಾಗಿ ಮಾಡುವುದಕ್ಕೆ ಮುಂದಾಗುತ್ತೇನೆ ಎಂದು ಹೇಳಿದರು.

ನಾವು ಕೆಲಸಕ್ಕೆ ಸೇರಿ ಸಂದರ್ಭದಲ್ಲಿ ಇಷ್ಟೊಂದು ಟೆಕ್ನಾಲಜಿಗಳು ಇರಲಿಲ್ಲ. ಆದರೆ ಈಗ ಟೆಕ್ನಾಲಜಿಗಳು ತುಂಬಾ ಇವೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ಪ್ರಕೃತಿಗೆ ವಿರುದ್ಧವಾಗಿ ನಡೆಯುವಂತಹ ಕಾರ್ಯಗಳು ಮತ್ತು ಚಟುವಟಿಕೆಗಳು, ಅಪಘಾತ ಅಥವಾ ಅವಘಡಗಳನ್ನು ತಡೆಯಬಹುದು, ಇದನ್ನು ಬಳಸಿಕೊಳ್ಳಿ ಎಂದು ಯುವ ಸಿಬ್ಬಂದಿಗಳಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿಯಾದ ಅಡವೀಶ್, ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸದಾಶಿವಯ್ಯನವರ ಕುಟುಂಬಸ್ಥರು ಪಾಲ್ಗೊಂಡಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";