ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ನಾಗೇನಹಳ್ಳಿ ಸರ್ಕಾರಿ ಪಾಠ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ನಾರಾಯಣಪ್ಪ ನವರು ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿ ಬೇರೆ ಶಾಲೆಗೆ ವರ್ಗಾವಣೆಯಾದ್ದರಿಂದ ಶಾಲಾ ಶಿಕ್ಷಕ ಬಳಗ ಹಾಗೂ ಎಸ್. ಡಿ. ಎಂ. ಸಿ. ವತಿಯಿಂದ ನಾರಾಯಣಪ್ಪನವರಿಗೆ ಬೀಳ್ಕೊಡಿಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಮಂಜುನಾಥ ಮಾತನಾಡಿ ಗುರು-ಶಿಷ್ಯರ ಸಂಬಂಧವು ಭಾರತೀಯ ಸಂಸ್ಕೃತಿಯಲ್ಲಿ ಆಳವಾದ ಆಧ್ಯಾತ್ಮಿಕ ಮತ್ತು ಪೌರಾಣಿಕ ಬಾಂಧವ್ಯವಾಗಿದ್ದು, ಜ್ಞಾನದ ಮತ್ತು ಮಾರ್ಗದರ್ಶನಕ್ಕಾಗಿ ಅತ್ಯಂತ ಮುಖ್ಯವಾಗಿದೆ. ಇದು ನಂಬಿಕೆ, ಗೌರವ, ನಿಷ್ಠೆ ಮತ್ತು ಪರಸ್ಪರ ಬದ್ಧತೆಯನ್ನು ಆಧರಿಸಿದೆ. ಅಲ್ಲಿ ಗುರು ಶಿಷ್ಯನಿಗೆ ಆಧ್ಯಾತ್ಮಿಕ ಮತ್ತು ಲೌಕಿಕ ಜ್ಞಾನದ ಬೆಳಕನ್ನು ತೋರಿಸುವ ಮಾರ್ಗದರ್ಶಕ. ಇದು ಶಿಷ್ಯನಿಗೆ ಮುಂದಿನ ಜೀವನ ಆಧಾರವಾಗಿದೆ. ಇಂತಹ ಗುರುಗಳಾದ ನಾರಾಯಣಪ್ಪ ನವರು ನಮ್ಮೂರಿನ ಶಾಲೆಯಲ್ಲಿ ಸುಮಾರು ನಾಲ್ಕು ವರ್ಷ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆ ಯಾಗಿದ್ದು ಅವರಿಗೆ ಗೌರವದಿಂದ ಸನ್ಮಾನಿಸಿ ಬೀಳ್ಕೊಡಲಾಗಿದೆ ಎಂದು ಹೇಳಿದರು.
ನಂತರ ಮುಖ್ಯ ಶಿಕ್ಷಕಿ ಚಿಕ್ಕ ಹನುಮಕ್ಕ ಮಾತನಾಡಿ ಸರ್ಕಾರಿ ಶಾಲೆ ಎಲ್ಲಾ ರೀತಿಯ ಸೌಲಭ್ಯ ಗಳು ಇರುವುದರಿಂದ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿರುವುದರ ಮುಖಾಂತರ ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದರು.
ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿಹೆಚ್. ಎಸ್. ಕುಮಾರ್, ಘಾಟಿ (ಮೇಲಿನ ಜೂಗಾಹಳ್ಳಿ) ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೈಲಾರಪ್ಪ ಹಾಲಿ ಸದಸ್ಯೆ ಶ್ರೀಮತಿ ಶೋಭಾರಣಿ, ವೆಂಕಟಾಚಲ,ಎಂ ಎಸ್ ಎಸ್ ಘಾಟಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆರ್ ಮಹಾದೇವ್ ,ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಮಂಜುನಾಥ್, ಕೃಷ್ಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಅಶ್ವಥ್ ಗೌಡ, ನಾರಾಯಣ ಗೌಡ, ಮಧು, ಮಾಜಿ ಎಸ್ಡಿಎಂಸಿ ಅಧ್ಯಕ್ಷೆ ಪ್ರೇಮ, ಶ್ರೀ ಕೇಶವ್, ನಾರಾಯಣಪ್ಪ, ಮೈಲಾರಪ್ಪ, ಪ್ರಭಾ, ಶ್ರೀ ಲಕ್ಷ್ಮಿ, ರಾಕೇಶ್, ಅಕ್ಲಪ್ಪನವರು, ಅಕ್ಷರ ದಾಸೋಹ ಸಿಬ್ಬಂದಿಯವರು, ಹಾಗು ಗ್ರಾಮದ ಸುತ್ತಮುತ್ತಲಿ ಗ್ರಾಮಸ್ಥರು ಹಾಜರಿದ್ದರು.

