ರೈತ ನಾಯಕ ಸೋಮಗುದ್ದು ರಂಗಸ್ವಾಮಿಯವರ ತೇಜೋವಧೆ ಸಲ್ಲ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಅಖಂಡ ಕರ್ಣಾಟಕ ರಾಜ್ಯ ರೈತ ಸಂಘದ ಸೋಮಗುದ್ದು ರಂಗಸ್ವಾಮಿಯವರು ಸುಮಾರು ನಾಲ್ಕು ದಶಕಗಳ ಕಾಲ ಸುಧೀರ್ಘ ಅವಧಿಯಲ್ಲಿ ಅನೇಕ ರೈತ ಪರ ಹೋರಾಟಗಳನ್ನು ಮಾಡಿ ರೈತರಿಗೆ ನ್ಯಾಯ ಕೊಡಿಸುವಲ್ಲಿ ಸಫಲರಾಗಿದ್ದಾರೆ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ್ ಎ ತಿಳಿಸಿದ್ದಾರೆ.

ಬರದ ನಾಡಿಗೆ ಭದ್ರ ನೀರನ್ನು ತರುವ ಹೋರಾಟದಲ್ಲೂ ಕೂಡ ಸಕ್ರಿಯವಾಗಿ ಪಾಲ್ಗೊಂಡು ತಮ್ಮದೇ ಸಲಹೆ ಸೂಚನೆಗಳನ್ನು ಕೊಟ್ಟು ಭದ್ರಾ ನೀರು ತರಲು ಶ್ರಮವಹಿಸಿದ್ದಾರೆ. ರಂಗಸ್ವಾಮಿಯವರು ಸದಾ ಹಸನ್ಮುಖಿಯಾಗಿ ಕೃಷಿಯಿಂದ ಸರಳ ಜೀವನವನ್ನು ನಡೆಸುತ್ತಿದ್ದಾರೆ,

ಇಂತಹ ಮೇರು ವ್ಯಕ್ತಿತ್ವವುಳ್ಳ ರಂಗಸ್ವಾಮಿಯವರ ಮೇಲೆ , ಅವರ ಜೊತೆಗೆ ಇರುವವರು ರಂಗಸ್ವಾಮಿ ಅವರ ಮೇಲೆ ವಿನಾ ಕಾರಣ ದೂರುತಿರುವುದು ಸರಿಯಲ್ಲ. ಆವರ ಜೊತೆ ಬಹಳ ವರ್ಷ ಕೆಲಸ ಮಾಡಿ ನಾವು ನೀವು ಒಂದೇ ದೋಣಿಯಲ್ಲಿ ಸಾಗುತ್ತಿದ್ದೇವೆ. ಎಲ್ಲಾ ರೈತರು ಒಗ್ಗಟಾಗಿ ಇದ್ದರೆ ನೊಂದ ರೈತರಿಗೆ ನ್ಯಾಯ ಕೊಡಿಸಬಹುದು.

ಒಗ್ಗಟಿನಲ್ಲಿ ಬಲವಿದೆ, ನಾವು ನೀವು ಎಲ್ಲರು ಸೇರಿ ಅವರ ಹೆಸರಿಗೆ ಸಲ್ಲದ ಆರೋಪ ಮಾಡುವುದು ಮತ್ತು ಕೆಸರು ಎರಚುವುದನ್ನು ಹಾಗೂ ತೇಜೋವಧೆ ಮಾಡುವುದನ್ನು ಬಿಟ್ಟು  ಒಳ್ಳೆಯ ಉದ್ದೇಶದಿಂದ ಅವರ ಜೊತೆ ನಾವು ನೀವು ಎಲ್ಲರು ಸೇರಿ ಅಖಂಡ ರೈತ ಸಂಘ ಕಟ್ಟೋಣ.

ಹಾಗೇ ಸ್ಥಳೀಯ ಶಾಸಕರಾದ ಟಿ.ರಘುಮೂರ್ತಿ ಅವರು ಪರಶುರಾಂಪುರ ಭಾಗದ ವೇದಾವತಿ ನದಿಗೆ ಅಡ್ಡಲಾಗಿ ಸುಮಾರು 7 ಚೆಕ್ ಡ್ಯಾಂ, ಚೆಕ್ ಡ್ಯಾಂ ಕಮ್ ಬ್ಯಾರೇಜ್ ನಿರ್ಮಾಣ ಮಾಡಿ ನೂರಾರು ಹಳ್ಳಿಗಳಿಗೆ ಕುಡಿಯುವ ನೀರು, ಅಂತರ್ಜಲ ಮಟ್ಟ ಅಭಿವೃದ್ಧಿ, ರೈತರ ಆರ್ಥಿಕ ಮಟ್ಟ ಸುಧಾರಿಸುವಲ್ಲಿ ಶಾಸಕರ ಪತ್ರ ಮಹತ್ವದ್ದಾಗಿದೆ.
ರಂಗಸ್ವಾಮಿಯವರು ರೈತ ಪರ ಕೆಲಸ ಮಾಡುವ ವ್ಯಕ್ತಿ ಮುಖ್ಯ ಎಂದು ಬೇಷರತ್ ಬೆಂಬಲ ಘೋಷಿಸಿದರು ಎಂದು ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ್ ಎ ಪರಶುರಾಂಪುರ ತಿಳಿಸಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ರೈತರು ರಂಗಸಾಮಿಯವರ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು.
ಪದಾಧಿಕಾರಿಗಳಾದ ರಂಗಸ್ವಾಮಿ
, ಪರಶುರಾಮ್, ಗೋಸಿಕೆರೆ ರಾಜು, ಗಿರಿಧರ್, ಕೃಷ್ಣಮೂರ್ತಿ, ಸ್ವಾಮಿ, ಶಿವಣ್ಣ, ವೆಂಕಟರಮಣಪ್ಪ ಇನ್ನು ಮುಂತಾದ ರೈತರು ಇದ್ದು ಸೋಮಗುದ್ದು ರಂಗಸ್ವಾಮಿ ಅವರಿಗೆ ಆತ್ಮಸ್ಥೈರ್ಯ ತುಂಬಿ ಜೊತೆ ಇರುವುದಾಗಿ ಘೋಷಿಸಿದರು.

 

 

- Advertisement -  - Advertisement - 
Share This Article
error: Content is protected !!
";