ವಿದ್ಯುತ್ ದ್ವಿಮಾರ್ಗ ಬದಲಾವಣೆಗೆ ರೈತರ ಆಕ್ರೋಶ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರೈತರ ಜಮೀನನ ಮೇಲೆ ಹಾದು ಹೋಗಿರುವ 220 ಕೆವಿ ವಿದ್ಯುತ್ ದೊಡ್ಡಬಳ್ಳಾಪುರ  ತಾಲ್ಲೂಕು ಕೇಂದ್ರದಿಂದ ಗೌರಿಬಿದನೂರು ಕೇಂದ್ರದ ವರೆಗೆ  ವಿದ್ಯುತ್ ಲೈನ್ ಏಕ ಮಾರ್ಗವನ್ನು ಬದಲಾವಣೆ ಮಾಡಿ ದ್ವಿಮಾರ್ಗ ಮಾಡುತ್ತಿರುವ ಕೆಪಿಟಿಸಿಎಸ್ ಏಕಮುಖ ನಿರ್ಧಾರವನ್ನ ಖಂಡಿಸಿ ಮತ್ತು ರೈತರಿಂದ ವಶಕ್ಕೆ ಪಡೆಯುತ್ತಿರುವ ಭೂಮಿಗೆ ವೈಜ್ಞಾನಿಕ ದರ ನಿಗದಿಗೆ ಒತ್ತಾಯಿಸಿ ಮಾ.30 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ತಿಳಿಸಿದರು.

ನಗರದ ಎಪಿಎಂಸಿ ಮಾರುಕಟ್ಟೆಯ ಸಭಾಂಗಣದಲ್ಲಿ ಸೋಮವಾರ ರೈತ ಸಂಘದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ನಮ್ಮ ತಾಲ್ಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಗೌರಿಬಿದನೂರಿಗೆ 220 ಕೆವಿ ಹಾದುಹೋಗಿದೆ. ಈ ಹಿಂದೆ ಏಕರ್ಮಾಗದ ಕಾರಿಡಾರ್ ನಿರ್ಮಿಸಿ ರೈತರಿಗೆ 60 ವರ್ಷದವರೆಗೆ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಕೆಪಿಟಿಸಿಎಸ್ ಇದೀಗ ಏಕಾಏಕಿ ದ್ವಿಮಾರ್ಗ ಕಾರಿಡಾರ್ ಮಾಡಲು ಹೊರಟಿದೆ. ಇದಕ್ಕಾಗಿ ರೈತರಿಗೆ ನೀಡಬೇಕಾದ ಪರಿಹಾರ ಧನವನ್ನು ಅವೈಜ್ಞಾನಿಕವಾಗಿ ನಿಗದಿ ಮಾಡಲಾಗಿದೆ. ಇದು ರೈತರಿಗೆ ಮಾರಕವಾಗಲಿದೆ ಎಂದರು.

- Advertisement - 

ಬಮುಲ್ ನಿರ್ದೇಶಕ ಸತೀಶ್ ಮಾತನಾಡಿ, ಯಲಹಂಕದಲ್ಲಿ ಭೂಗತವಾಗಿ ಕೇಬಲ್ ಅಳವಡಿಸಲಾಗಿದೆ. ಖಾಸಗಿ ಬೃಹತ್ ಕಂಪನಿಯಾದ ಫಾಕ್ಸ್ ಕಾನ್ ಗೆ ಭೂಗತವಾಗಿ ವಿದ್ಯುತ್ ಸಂಪರ್ಕವನ್ನ ಸರ್ಕಾರ ನೀಡಿದೆ. ಆದರೆ ರೈತರಿಗೆ ಮಾತ್ರ ವಿದ್ಯುತ್ ಲೈನ್ ಗಳನ್ನು ಹಾಕುವ ಮೂಲಕ ಹೊಲಗಳಿಗೆ ಬೇಲಿ ಹಾಕುತ್ತಿದೆ. ರೈತರಿಗೆ ಬಿಡಿಗಾಸು ಕೊಡುವುದನ್ನು ಬಿಟ್ಟು ಮಾರುಕಟ್ಟೆ ಬೆಲೆಯಂತೆ ದರವನ್ನು ನೀಡಬೇಕು. ಅವೈಜ್ಞಾನಿಕ ನೀತಿಯನ್ನು ಬಿಡಬೇಕು ಇಲ್ಲವಾದಲ್ಲಿ ಮಾ3೦ ರಂದು ಪ್ರತಿಭಟನೆ ಮಾಡುವುದು ಖಚಿತ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಪ್ರಸನ್ನ,ಮುತ್ತೇಗೌಡ, ಹನುಮೇಗೌಡ, ತಿ.ರಂಗರಾಜು, ಸೇರಿದಂತೆ ಹಲವಾರು ರೈತ ಮುಖಂಡರು  ಹಾಜರಿದ್ದರು.

- Advertisement - 

 

Share This Article
error: Content is protected !!
";