ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರೈತ ಈ ದೇಶದ ಬೆನ್ನೆಲುಬು, ರೈತ ಇಲ್ಲದೆ ಬೆಳೆಗಳು ಇಲ್ಲ, ರೈತ ಬೆಳೆದಾಗ ಮಾತ್ರ ನಮ್ಮ ದೇಶಕ್ಕೆ ಅನ್ನ ಸಿಗುತ್ತದೆ ಅಂತಹ ರೈತರ ಹೆಸರಿನಲ್ಲಿ ರೈತ ನಮನ ಎಂದು ವಾರ್ಷಿಕೋತ್ಸವವನ್ನು ಏರ್ಪಡಿಸಲಾಗಿದೆ ಎಂದು ಎಸ್.ಜಿ.ಆರ್.ವಿ ಶಾಲೆಯ ಕಾರ್ಯದರ್ಶಿ ಶೇಷಗಿರಿ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಲಕ್ಕಸಂದ್ರ ಗ್ರಾಮದ ಎಸ್.ಜಿ.ಆರ್.ವಿ ಶಾಲೆಯಲ್ಲಿ ರೈತರೊಂದಿಗೆ ಜೊತೆ ಸೇರಿ ರೈತ ಗೀತೆಯೊಂದಿಗೆ ಚಾಲನೆ ನೀಡಿದ ಶಾಲೆಯ ಕಾರ್ಯದರ್ಶಿ ಶೇಷಗಿರಿರವರು ಮಾತನಾಡಿ, ವಿದ್ಯಾರ್ಥಿ ಜೀವನ ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ಕಾಲಘಟ್ಟ.ಗುಣಮಟ್ಟದ ಶಿಕ್ಷಣದಿಂದ ಮಾತ್ರ ಉತ್ತಮ ಪ್ರಜೆಗಳು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಹಾಗೂ ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡದೇ ಅವರನ್ನೇ ರಾಷ್ಟ್ರದ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಇನ್ನು ಸುತ್ತಮುತ್ತಲಿನ ಇರುವ ಎಲ್ಲಾ ರೈತರನ್ನು ಗುರುತಿಸಿ 12 ಜನರಿಗೆ ರೈತನ ನಮನ ಕಾರ್ಯಕ್ರಮದಲ್ಲಿ ರೈತ ರತ್ನ ಎಂಬ ಪ್ರಶಸ್ತಿಯನ್ನು ವಿತರಣೆ ಮಾಡಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ನಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡಗರ ಮನಸೂರೆಗೊಂಡವು. ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ರೈತರು ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಸಿಬ್ಬಂದಿ ವರ್ಗದವರು ಹಾಜರಿದ್ದರು.