ಹಿರಿಯೂರು ಬಸ್ ನಿಲ್ದಾಣ ನವೀಕರಣಗೊಳಿಸಲು ರೈತ ಸಂಘ ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಸ್ ನಿಲ್ದಾಣ ನವೀಕರಣಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ  ಸಂಘದ ಮನವಿ ಹಿರಿಯೂರಿನಲ್ಲಿ ಶನಿವಾರ ನೂತನ ಬಸ್ ಡಿಪೋ ಉದ್ಘಾಟನೆಗೆ ಆಗಮಿಸಿದ್ದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಹಿರಿಯೂರು ನಗರದ ಬಸ್ ನಿಲ್ದಾಣವನ್ನ ಮೇಲ್ದರ್ಜೆಗೇರಿಸಿ ಸುಸಜ್ಜಿತವಾದ ಎಲ್ಲಾ ಮೂಲಭೂತ ಎಲ್ಲ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಿ ನವೀಕರಿಸುವಂತೆ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮನವಿ ಸಲ್ಲಿಸಿದರು.

ಕಳೆದ 30 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಪ್ರಸ್ತುತ ಇರುವ ಬಸ್ ನಿಲ್ದಾಣವು ತುಂಬಾ ಇಕ್ಕಟ್ಟಿನಿಂದ ಕೂಡಿದ್ದು ವಿನೂತನವಾದ ವಿನ್ಯಾಸದೊಂದಿಗೆ ಸಕಲ ಸೌಲಭ್ಯಗಳನ್ನು ಒಳಗೊಂಡ ಬಸ್ ನಿಲ್ದಾಣವನ್ನಾಗಿ ರೂಪಿಸುವಂತೆ ಮನವಿ ಮಾಡಿದರು ಅಲ್ಲದೆ ಬಸ್ ಡಿಪೋ ಮೂಲಕ ಹಿರಿಯೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಅಗತ್ಯವಾದ ಸಾರಿಗೆ ಮಾರ್ಗಗಳನ್ನು ಗುರುತಿಸಿ ಹೆಚ್ಚಿನ ರೀತಿಯಲ್ಲಿ ಬಸ್ಸುಗಳನ್ನು ಸಂಚಾರಕ್ಕೆ ಅಣಿಗೊಳಿಸುವಂತೆ ಮನವಿ ಮಾಡಿದರು.

- Advertisement - 

ಹಲವರು ಬಸ್ ನಿಲ್ದಾಣದ ಬಸ್ ನಿಲ್ದಾಣದ ತಡೆಗೋಡೆಯನ್ನು ಹೊಡೆದು ಮಧ್ಯ ಅಂಗಡಿಗೆ  ದಾರಿ ನಿರ್ಮಿಸಿಕೊಂಡಿದ್ದು ಇದರಿಂದ ಪ್ರಯಾಣಿಕಗೆ ಕಿರಿಕಿರಿ ಉಂಟಾಗಿರುತ್ತದೆ ಶೀಘ್ರದಲ್ಲಿ ಕಾಂಪೌಂಡ್ ಗೋಡೆಯನ್ನು ಮುಚ್ಚಿ ಪ್ರಯಾಣಿಕರಿಗೆ ಸುರಕ್ಷತೆಯ ದೃಷ್ಟಿಯಿಂದ ಎಲ್ಲವನ್ನು ಮುಚ್ಚಬೇಕು ಮತ್ತು ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಬೇಕು ಮತ್ತು ಜನರಿಗೆ ಸಹಾಯವಾಗಬಲ್ಲ ವ್ಯವಸ್ಥೆಗಳನ್ನು ನಿಲ್ದಾಣದಲ್ಲಿ ರೂಪಿಸುವಂತೆ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ತಾಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ ಸಚಿವರಿಗೆ ಮನವಿ ಸಲ್ಲಿಸಿದರು.

 

- Advertisement - 

 

Share This Article
error: Content is protected !!
";