ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ, ಮುತ್ತಿಗೆ ಹಾಕಿ ಪ್ರತಿಭಟಿಸಿದ ರೈತ ಸಂಘ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು
ನಗರದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ನಗರಸಭೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಮುತ್ಚಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.

ಶೀಘ್ರವಾಗಿ ರಸ್ತೆ ಕಾಮಗಾರಿ ಮುಗಿಸುವಂತೆ ಒತ್ತಾಯಿಸಿ ನಗರ ಸಭೆ ಪೌರಾಯುಕ್ತ ಎ ವಾಸೀಂ ರವರಗೆ ಮನವಿ ಪತ್ರ ಸಲ್ಲಿಸಿದರು.

- Advertisement - 

ರೈತ ಸಂಘದ ಜಿಲ್ಲಾ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಮಾತನಾಡಿ ಅಂಬೇಡ್ಕರ್ ವೃತ್ತದಿಂದ ವೇದಾವತಿ ನದಿ ಸೇತುವೆವರೆಗೂ ನಡೆಯುತ್ತಿರುವ ಕಾಮಗಾರಿ ಪ್ರಾರಂಭವಾಗಿ ಒಂದು ವರ್ಷ ಕಳೆದರೂ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ ಕಾಮಗಾರಿಯಲ್ಲಿ ತೀವ್ರ ಕಳಪೆ ನಡೆಯುತ್ತಿರುವ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದ್ದು ಅಲ್ಲಲ್ಲಿ ಗುಂಡಿಗಳು ಬಿದ್ದಿವೆ ಮಳೆ ಬಂದು ನೀರು ತುಂಬಿದರೆ ಕೆಸರು ಸಿಡಿಯುತ್ತದೆ ಎಂದು ಅವರು ಕಿಡಿ ಕಾರಿದರು.

ರಸ್ತೆಗೆ ಸರಿಯಾಗಿ ನೀರು ಹಾಕದೆ ಇರುವುದರಿಂದ ಧೂಳು ತುಂಬಿ ನಾಗರಿಕರಿಗೆ ಓಡಾಡಲು ತೊಂದರೆ ಆಗುತ್ತದೆ. ಜಲ್ಲಿಕಲ್ಲು ತೇಲಿರುವುದರಿಂದ ವಾಹನ ಸವಾರರ ಮುಖಕ್ಕೆ ಏನಾದರೂ ಹೊಡೆಯಿತು ಎಂದರೆ ತುಂಬಾ ತೊಂದರೆ ಆಗುತ್ತದೆ. ತುರ್ತಾಗಿ ಕಾಮಗಾರಿ ಮುಗಿಸುವಂತೆ ಅವರು ಎಚ್ಚರಿಸಿದ್ದಾರೆ.

- Advertisement - 

ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ, ಸಣ್ಣ ತಿಮ್ಮಣ್ಣ, ವೀರಣ್ಣ ಗೌಡ, ಜಯಣ್ಣ, ಜಗನ್ನಾಥ್, ವಿರುಪಾಕ್ಷಪ್ಪ, ಹಳ್ಳಿಕೆರೆ ತಿಪ್ಪೇಸ್ವಾಮಿ, ರಾಮಣ್ಣ, ಮೀಸೆ ಗೌಡಪ್ಪ, ಬಾಲಕೃಷ್ಣ, ತಿಮ್ಮಾರೆಡ್ಡಿ, ರಂಗಜ್ಜ, ಜಗದೀ,ಶ್ ನಾಗರಾಜಪ್ಪ, ಶಹಜಾನ್, ಮಂಜುನಾಥ್, ತಿಪ್ಪೇಸ್ವಾಮಿ, ಈರಣ್ಣ, ರಮೇಶ್, ರಾಜಪ್ಪ ಭಾಗವಹಿಸಿದ್ದರು.

ವೇದಾವತಿ ಸೇತುವೆಯಿಂದ ಗಾಂಧಿ ವೃತದವರೆಗೆ ರಸ್ತೆ ಅಗಲೀಕರಣ ವಿಚಾರವಾಗಿ ಒತ್ತುವರಿ ಆಗಿರುವ ಕಟ್ಟಡವನ್ನು ತೆರವುಗೊಳಿಸದೆ ರಸ್ತೆ ಅಗಲೀಕರಣ ಮಾಡದೇ ಇರುವುದರಿಂದ ನಗರದ ಒಳಗೆ ಬರುವ ವಾಹನಗಳಿಂದ ಟ್ರಾಫಿಕ್ ಜಾಮ್ ಆಗುತ್ತದೆ ಮತ್ತು ಈಗಾಗಲೇ ರೆಡ್ಡಿ ಹೋಟೆಲ್ ನಿಂದ  ಗಾಂಧಿ ಸರ್ಕಲ್, ಗಾಂಧಿ ಸರ್ಕಲ್ ಯಿಂದ ಹುಳಿಯಾರು ರಸ್ತೆ,

ಚಾನೆಲ್ ಹೊರಗೆ ರಸ್ತೆ ಅಗಲೀಕರಣ ಕಾಮಗಾರಿ ರಸ್ತೆ ಹಂಚಿನಿಂದ ಎರಡು ಬದಿಯಲ್ಲೂ ಈ ಕಡೆ ಮೂರು ಮೀಟರ್ ಆಕಡೆ ಮೂರು ಮೀಟರ್ ಅಗಲೀಕರಣ ಮಾಡಲಾಗಿದ್ದು ರಾತ್ರೋರಾತ್ರಿ ಡಾಂಬರೀಕರಣ ಮಾಡಿ ನಿಯಮ ಉಲ್ಲಂಘನೆ ಮಾಡಿ ಕಳಪೆ ಕಾಮಗಾರಿ ಮಾಡಿ ಹಣ ಪಡೆಯಲಾಗಿದೆ ಮತ್ತು ನಗರದಲ್ಲಿ 12 ಕೋಟಿ ವಿಶೇಷ ಅನುದಾನದಲ್ಲಿ ವಿವಿಧ ಕಾಮಗಾರಿ ನಡೆಸದೇ ಹಣ ಪಡೆದಿರುತ್ತಾರೆ ಎಂದು ಸಾರ್ವಜನಿಕರು ಅಲ್ಲಲ್ಲಿ ಮಾತನಾಡುತ್ತಿದ್ದಾರೆ ಇವುಗಳ ಬಗ್ಗೆ ತುರ್ತಾಗಿ ಕ್ರಮವಹಿಸಿ ನಗರದ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಸೂಕ್ತ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ರೈತ ಹಸಿರು ಸೇನೆ ವತಿಯಿಂದ ಒತ್ತಾಯಿಸಿದೆ.

 

 

 

Share This Article
error: Content is protected !!
";