ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಜೆಜೆ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರನ್ನ ಬದಲಾವಣೆ ಮಾಡಿ ಜನಗಳಿಗೆ ಸ್ಪಂದಿಸುವಂತಹ ವೈದ್ಯರನ್ನು ನೇಮಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರೇ ಸೇನೆ ವತಿಯಿಂದ ತಾಲೂಕು ವೈದ್ಯಾಧಿಕಾರಿ ವೆಂಕಟೇಶ್ ರವರಿಗೆ ಮನವಿ ಸಲ್ಲಿಸಿದರು.
ಜೆಜಿ ಹಳ್ಳಿಯ ಸುತ್ತಮುತ್ತ ಇರುವ ಬಡ ಜನರು ಸರ್ಕಾರಿ ಆಸ್ಪತ್ರೆಗೆ ಅವಲಂಬಿತರಾಗಿದ್ದಾರೆ. ಬಡ ರೋಗಿಗಳಿಗೆ ಸ್ಪಂದಿಸದ ವೈದ್ಯರು ಇದ್ದರೆ ಏನು ಪ್ರಯೋಜನ ರೋಗಿಗಳಿಗೆ ಸ್ಪಂದಿಸುವಂತ ವೈದ್ಯರನ್ನು ನೇಮಿಸಿ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದು ತಾಲೂಕು ವೈದ್ಯಾಧಿಕಾರಿಗಳು ತಕ್ಷಣ ವೈದ್ಯರನ್ನು ನೇಮಿಸುವಂತೆ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ
ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆಯಲ್ಲಿರುವ ಔಷಧಿಗಳು ವಿತರಿಸದೆ ಚೀಟಿ ಬರೆದು ಹೊರಗಡೆ ತೆಗೆದುಕೊಳ್ಳುವಂತೆ ಹೇಳುತ್ತಾರೆ.
ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂದು ಸರ್ಕಾರಿ ಆಸ್ಪತ್ರೆಗೆ ಬಂದರೆ ಹೊರಗಡೆ ಚೀಟಿ ಬರೆದು ಕೊಟ್ಟರೆ ಅವರಿಗೆ ಹಣ ಎಲ್ಲಿಂದ ಬರಬೇಕು ಸರ್ಕಾರಿ ದಿಂದ ಸಿಗುವ ಔಷಧಿಗಳನ್ನು ಕೊಡದೆ ವೈದ್ಯರು ಚೀಟಿ ಬರದೆಯುವುದು ತಪ್ಪಲ್ಲವೇ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಮಾತ್ರೆಗಳು ಸಿಗುವಂತೆ ಮಾಡಬೇಕು ಆದ್ದರಿಂದ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು.
ಜೆಜೆಹಳ್ಳಿ ಹೋಬಳಿ ಗಡಿ ಭಾಗವಾಗಿದ್ದು ಸುತ್ತಮುತ್ತ ಗ್ರಾಮಗಳಿಗೆ ಜೆಜೆಹಳ್ಳಿ ಕೇಂದ್ರ ಬಿಂದುವಾಗಿದ್ದು ಈ ಆಸ್ಪತ್ರೆಯನ್ನು ಮೇಲೆ ದರ್ಜೆಗೆ ಮಾಡವಂತೆ ರೈತ ಸಂಘದ ತಾಲೂಕು ಅಧ್ಯಕ್ಷ ಆಲೂರು ಸಿದ್ರಾಮಣ್ಣ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹೋಬಳಿಯ ಅಧ್ಯಕ್ಷ ಈರಣ್ಣ, ಎಂಆರ್ ಈರಣ್ಣ, ಕೆ ಆರ್ ಹಳ್ಳಿ ರಾಜಪ್ಪ, ರಾಜಕುಮಾರ, ಚಂದ್ರಪ್ಪ, ದಿಂಡಾವರ ಸಣ್ಣ ತಿಮ್ಮಣ್ಣ, ವಿರೂಪಾಕ್ಷಪ್ಪ, ಕನ್ನಪ್ಪ, ವಜೀರ್ ಸಾಬ್, ಜಯರಾಮಣ್ಣ, ಪೆಟ್ರೋಲ್ ಬಂಕ್ ಮಹಾಲಿಂಗಪ್ಪ, ಕಲೀಮ್ ಸಾಬ್, ನಟರಾಜ್, ಆರ್ ಕೆ ಗೌಡ, ತಿಪ್ಪೇಸ್ವಾಮಿ, ಮಂಜುನಾಥ್, ಚಂದ್ರಪ್ಪ, ಶಿವಣ್ಣ, ತಿಮ್ಮಣ್ಣ, ಕುಮಾರ್ ಇದ್ದರು.