ಬೆಳೆ ಹಾನಿ ಹಾಗೂ ಬೆಳೆ ನಷ್ಟ ಪರಿಹಾರಕ್ಕಾಗಿ ರೈತರು ವಿಮಾ ಕಂಪನಿ ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಿ:ಅಶೋಕ್

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರಧಾನಮಂತ್ರಿ ಫಸಲ್‌ಭಿಮಾ ಯೋಜನೆಯಡಿ ಬೆಳೆನಷ್ಟ ಹಾಗೂ ಇತರೆ ನಷ್ಟಕ್ಕೆಒಳಗಾದ ರೈತರು ವಿಮಾಕಂಪನಿಗೆ ಮಾಹಿತಿ ನೀಡಿ ಪರಿಹಾರ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್‌ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.ಅವರು ಈ ಬಗ್ಗೆ ಮಾಹಿತಿ ನೀಡಿ, ತಾಲ್ಲೂಕಿನ ರೈತರು ಪ್ರಕೃತಿ ವಿಕೋಪದಿಂದ ಆಗುವ ಬೆಳೆನಷ್ಟ ಹಾಗೂ ಭೂಕುಸಿತ, ಆಲಿಕಲ್ಲು ಮಳೆ, ಬೆಳೆ ಮುಳುಗಡೆ, ಸ್ಪೋಟ, ಗುಡುಗು, ಮಿಂಚಿನಿಂದಬೆಳೆಗೆ ಹಾನಿ, ಕಟಾವು ನಂತರವೂ ಬೆಳೆಯನ್ನು ಒಣಗಲು ಬಿಟ್ಟ ಸಮಯದಲ್ಲಿ ಅಕಾಲಿನ ಮಳೆ, ಚಂಡಮಾರುತಕ್ಕೆ ತುತ್ತಾದಲ್ಲಿ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ೨೦೨೪-೨೫ನೇ ಸಾಲಿನ ರೈತರು  ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿಯ ಉಚಿತ ದೂರವಾಣಿ ಸಂಖ್ಯೆ ೧೮೦೦೪೨೫೬೬೭೮ ಗೆ ೭೨ ಗಂಟೆಗಳ ಒಳಗೆ ಸಂಪರ್ಕಿಸಿದರೆ ಸಂಬಂಧಪಟ್ಟ ಕಂಪನಿಯ ವಿಮಾಪ್ರತಿನಿಧಿಗಳು ತಮ್ಮ ಜಮೀನಿಗೆ ಭೇಟಿ ನೀಡಿ ನಷ್ಟದ ಅಂದಾಜನ್ನು ಸಿದ್ದಪಡಿಸಿ ರೈತರ ಖಾತೆಗೆ ಜಮಾಮಾಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಬೆಳೆ ನಷ್ಟಕ್ಕೆಒಳಗಾದ ರೈತರು ಮೇಲ್ಕಂಡ ಪಂಕನಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿದ ಕೂಡಲೇ ಸಂಬಂಧಪಟ್ಟ ಕಂಪನಿಯ ವಿಮಾ ಪ್ರತಿನಿಧಿಗಳು ನಿಮ್ಮ ಜಮೀನಿಗೆ ಭೇಟಿ ನೀಡಿ ನಷ್ಟದ ಅಂದಾಜನ್ನು ಕೂಡಲೇ ಸಿದ್ದಪಡಿಸಿ ಕಂಪನಿಗೆ ಕಳಿಸಿಕೊಡುತ್ತಾರೆ. ಕಂಪನಿವತಿಯಿಂದ ಸಂಬಂಧಪಟ್ಟ ರೈತರ ಖಾತೆಗೆ ನಷ್ಟವಾದ ಮೊತ್ತವನ್ನು ನೇರವಾಗಿ ಖಾತೆಗೆ ಜಮವಾಗಲಿದ್ದು, ಇದರ ಸದುಪಯೋಗವನ್ನು ರೈತರು ಪಡೆಯುವಂತೆ ಮನವಿ ಮಾಡಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";