ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಅಧಿಕಾರಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿದ್ದೇಶ್ವರನ ದುರ್ಗದ ಗ್ರಾಮ ಪಂಚಾಯಿತಿಯ ರೈತರ ಸಮ್ಮುಖದಲ್ಲಿ ಬೆಳೆ ಸಮೀಕ್ಷೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಬೆಳೆ ಸಮೀಕ್ಷೆಗೆ ಆಯ್ಕೆಯಾದ ಎಲ್ಲಾ ರೈತರ ಜಮೀನುಗಳಲ್ಲಿ ರ್ಯಾಂಡಮ್ ನಲ್ಲಿ ಶೇಂಗಾ ಬೆಳೆ ಮೌಲ್ಯಮಾಪನ ಮಾಡಿದ್ದು ಗ್ರಾಮಗಳಿಂದ ಎರಡೂವರೆ ಕೆಜಿ ಶೇಂಗಾ ಇಳುವರಿ ಬಂದಿದ್ದು ತೀವ್ರ ಕುಸಿತವಾಗಿದೆ.
ಬರಪೀಡಿತ ಪ್ರದೇಶದಲ್ಲಿ ಬರುವಂತಹ ಮೌಲ್ಯಮಾಪನವಾಗಿದ್ದು ಬೆಳೆ ವಿಮೆ ಕಟ್ಟಿರುವ ರೈತರಿಗೆ ಪ್ರತಿಶತ ನೂರಕ್ಕೆ ನೂರರಷ್ಟು ಬೆಳೆ ವಿಮಾ ಪರಿಹಾರವನ್ನು ನೀಡಬೇಕು ಹಾಗೆ ಚಳ್ಳಕೆರೆ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಕೂಡಲೇ ಘೋಷಣೆ ಮಾಡಬೇಕೆಂದು ರೈತರ ಅಹವಾಲಾಗಿರುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ನಾಗರಾಜ ಪರಶುರಾಂಪುರ ವಿಮಾಧಿಕಾರಿ ಬೊಮ್ಮೇಶ್, ಕಂದಾಯ ಅಧಿಕಾರಿ ಜಯಂತ್, ಗ್ರಾಮಸೇವಕ ನಾಗರಾಜ್, ರೈತ ಮುಖಂಡ ರಮೇಶ್, ರೈತ ನೇತಾರ ಜಾನಿ ಶಿವಣ್ಣ, ದೇವರಾಜ, ಸದಾನಂದ, ತಿಪ್ಪೇಸ್ವಾಮಿ, ಸಿದ್ದೇಶ್ವರನ ದುರ್ಗದ ಹನುಮಂತರೆಡ್ಡಿ, ಚಿತ್ತಯ್ಯ, ಏಜೆಂಟ್ ಶಿವಣ್ಣ, ನಾಗರೆಡ್ಡಿ ಇನ್ನು ಮುಂತಾದ ರೈತರು ಹಾಜರಿದ್ದರು.

