ನಾಳೆ ರೈತರ ಸಭೆ, ರೈತರಿಗೆ ಹೆಚ್ಚಿನ ಹಣ ನೀಡುವ “ಕಾರ್ಬನ್ ಕ್ರೆಡಿಟ್” ಏನಿದು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಪತ್ರಿಕಾ ಭವನದಲ್ಲಿ ಶ್ರೀಗಂಧ ಬೆಳೆಗಾರರು ಮತ್ತು ಇತರೆ ರೈತರ ಸಭೆಯನ್ನು ದಿನಾಂಕ-13 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ.

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷರು, ವಿಶ್ರಾಂತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರು ನೇತೃತ್ವದಲ್ಲಿ ನಡೆಯಲಿರುವ ಈ ಮಹತ್ವದ ರೈತರ ಸಭೆಗೆ ಆಸಕ್ತ ರೈತರು ಆಗಮಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಹವಾಮಾನ ವೈಪರಿತ್ಯ, ಹಾಗೂ ಜಾಗತಿಕ ಉಷ್ಣಾo ತಡೆಗಟ್ಟಲು, ಸ್ಥಳೀಯ ಸರ್ಕಾರದ ಕಾನೂನುಗಳು ಬೃಹತ್ ಕಾರ್ಖಾನೆ ಹಾಗೂ ಉದ್ಯಮಿಗಳಿಗೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಇಂತಿಷ್ಟೆ ಪ್ರಮಾಣದಲ್ಲಿ ವಾಯು ಮಾಲಿನ್ಯ ಮಾಡಬಹುದು ಎಂಬ ನಿಬಂಧನೆ ವಿಧಿಸಿರುತ್ತವೆ.

ಆದರೆ ಉಧ್ಯಮಗಳು ನಿಂಬಂಧನೆ ಮೀರಿ ಹೆಚ್ಚಿನ ಪ್ರಮಾಣದಲ್ಲಿ ವಾಯು ಮಾಲಿನ್ಯ ಮಾಡುತ್ತವೆ. ಇಂತಹ ಹೆಚ್ಚಿನ ವಾಯು ಮಾಲಿನ್ಯವನ್ನು ಸಮತೋಲನ ಮಾಡಲು, ಪರಿಸರ ರಕ್ಷಿಸುವ ದೃಷ್ಟಿಯಿಂದ ಸರ್ಕಾರಗಳು ಇಂತಿಷ್ಟು ಪ್ರಮಾಣದಲ್ಲಿ ಉತ್ಪಾದಿಸಿದ ಇಂಗಾಲವನ್ನು ಪರಿಸರದಲ್ಲಿ ಹಿಡಿದಿಡಲು ಹೇಳುತ್ತದೆ.

ಆದರೆ ಉದ್ಯಮಗಳಲ್ಲಿ ಅಷ್ಟು ಪ್ರಮಾಣದಲ್ಲಿ ಇಂಗಾಲ ಹಿಡಿದಿಡುವ ಸಾಧ್ಯತೆ ಇರುವುದಿಲ್ಲ. ಕಾರಣ ಇಂಗಾಲ ಹಿಂಗಿಸುವಿಕೆ ಅಥವಾ ಹಿಡಿದಿಡುವ ಏಕೈಕ ದಾರಿ ಎಂದರೆ ಗಿಡಮರಗಳು. ಆದ ಕಾರಣ, ತಮ್ಮ ಉದ್ಯಮದಲ್ಲಿ ಬಿಡುಗಡೆ ಮಾಡಿದ ಹೆಚ್ಚಿನ ಪ್ರಮಾಣದ ಇಂಗಾಲವನ್ನು ಉದ್ಯಮಗಳು ಹಿಡಿದಿಟ್ಟುಕೊಳ್ಳುವ ದಾರಿ ಹುಡುಕುತ್ತಾರೆ.

ಇಂತಹ ಸಂದರ್ಭದಲ್ಲಿ ಉದ್ಯಮಗಳು ಗುರುತಿಸುವುದು ಗಿಡ ಮರ ಬೆಳೆಸುವ ರೈತರನ್ನು. ರೈತರು ತಮ್ಮ ದೈನಂದಿನ ಕಾಯಕ ಕೃಷಿಯ ಮೂಲಕ ಬೆಳೆಸುವ ಗಿಡಮರದ ಮೂಲಕ, ತಮ್ಮ ಅರಿವಿಗೂ ಬಾರದಂತೆ ಜಮೀನಿನಲ್ಲಿ ಇಂಗಾಲವನ್ನು ಹಿಂಗಿಸಿ, ಹಿಡಿದಿದುತ್ತಾರೆ.

ಇಂತಹ ಇಂಗಾಲವನ್ನು ಖರೀದಿಸಲು ಉದ್ಯಮಗಳು ಮುಂದೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಆರಿಗ್ರಾಫ್ DLT ಸಂಸ್ಥೆಯು ರೈತರ ಒಡಂಬಡಿಕೆಯ ಮೇರೆಗೆ ರೈತರ ಜಮೀನುಗಳಿಗೆ ಭೇಟಿ ನೀಡಿ, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸುತ್ತಾರೆ.

ರೈತರು ತಮ್ಮ ಜಮೀನುಗಳಲ್ಲಿ ಬೆಳೆಯುವ ಎಲ್ಲಾ ತರಹದ ಬೆಳೆಗಳಲ್ಲಿ ಅಂದರೆ, ಎಲೆ, ಕಾಂಡ, ತೊಗಟೆ, ಬೇರು ಹಾಗೂ ಮಣ್ಣಿನಲ್ಲಿ ಇರುವ ಹ್ಯೂಮಸ್ ಗಳ ಪ್ರಮಾಣವನ್ನು ಕೂಡ ವೈಜ್ಞಾನಿಕವಾಗಿ ಸರ್ವೇ ಮಾಡಿ ಅದರಲ್ಲಿ ಸಿಗುವ ಒಟ್ಟಾರೆ ಇಂಗಾಲ ಇಂಗಿಸುವಿಕೆಯ ಪ್ರಮಾಣ ಅಳೆಯುತ್ತಾರೆ.

ಇಂತಹ ಸಂಗ್ರಹವಾದ ಇಂಗಾಲಾದ ಪ್ರಮಾಣವನ್ನು ಟನ್ ಲೆಕ್ಕದಲ್ಲಿ ಅಳೆದು, ಒಂದು ಟನ್ ಇಂಗಾಲ ಸಂಗ್ರಹಣೆಗೆ ಅಂದಿನ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಉದ್ಯಮಗಳಿಗೆ ಮಾರಾಟ ಮಾಡಿ, ಅದರ ಲಾಭoಶದಲ್ಲಿ ಭೀಮಪಾಲನ್ನು ರೈತರಿಗೆ  ಅವರ ಬ್ಯಾಂಕ್ ಖಾತೆಗೆ ವರ್ಷಕ್ಕೆ ಒಂದು ಬಾರಿ ನೇರವಾಗಿ ಹಣ ಸಂದಾಯ ಮಾಡುತ್ತಾರೆ.

ಕಾರ್ಬನ್ ಕ್ರೆಡಿಟ್ ಯೋಜನೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಸರ್ವೇ ಸಾಮಾನ್ಯ ಎಲ್ಲಾ ಬೆಳೆಗಳಿಗೂ ಅನ್ವಯವಾಗುತ್ತದೆ. ಅದರಲ್ಲಿಯೂ, ಮಿಶ್ರ ಕೃಷಿ ಅಳವಡಿಸಿಕೊಂಡು, ಸಾವಯವ ರೀತಿಯ ಕೃಷಿ ಪದ್ಧತಿ ಅಳವಡಿಸಿಕೊಂಡ ಕೃಷಿಕರಂತೂ ತಮ್ಮ ಭೂಮಿ ತಾಯಿಯ ಸೇವೆಗೆ ಉತ್ತಮ ಮೊತ್ತದ ಹಣ ಸಂದಾಯವಾಗುವ ನಿರೀಕ್ಷೆ ಇರುತ್ತದೆ.

ಪ್ರಮುಖವಾಗಿ ರೈತರು ಕಾರ್ಬನ್ ಕ್ರೆಡಿಟ್ ಯೋಜನೆಗೆ ಒಡಂಬಡಿಕೆ ಮಾಡಿಕೊಳ್ಳಲು ಯಾವುದೇ ರೀತಿಯ ಶುಲ್ಕವಿಲ್ಲ ಹಾಗೂ ಪ್ರತಿವರ್ಷ ಕುರಿತು ಯಾವುದೇ ಹಣ ಪಾವತಿ ಮಾಡಬೇಕಿಲ್ಲ.

ರೈತರ ಜಮೀನಿನಲ್ಲಿ ಸಂಗ್ರಹಣೆಯಾದ ಇಂಗಾಲದ ಪ್ರಮಾಣದ ಅಳತೆ ಮಾಡುವುದರಿಂದ ಹಿಡಿದು, ಇಂಗಾಲಕ್ಕೆ ಜಾಗತಿಕ ಮಾರುಕಟ್ಟೆ ಕಲ್ಪಿಸಿ, ಮಾರಾಟ ಮಾಡಿ, ರೈತರ ಖಾತೆಗೆ ಹಣ ಸಂದಾಯ ಮಾಡುವ ಪೂರ್ಣ ಜವಾಬ್ದಾರಿ ಆರಿಗ್ರಾಫ್ DLT ಸಂಸ್ಥೆಯು ಮಾಡುತ್ತದೆ. ಕೆಳಕಂಡ ದಾಖಲೆಗಳನ್ನು ರೈತರು ನೀಡಿ ಒಡಂಬಡಿಕೆಗೆ ಸಹಿ ಮಾಡಿದರೆ ರೈತರು ಸತತ 40 ವರ್ಷಗಳ ಕಾಲ ಪ್ರತಿವರ್ಷ ಯಾವುದೇ ಖರ್ಚು ಇಲ್ಲದೇ ಉತ್ತಮ ಪ್ರಮಾಣದಲ್ಲಿ ಲಾಭ ಪಡೆಯಬಹುದು.

ಒಡಂಬಡಿಕೆಗೆ ರೈತರಿಂದ ಬೇಕಾಗುವ ದಾಖಲೆಗಳು.
1.ಜಮೀನಿನ ಪಹಣಿ ಪತ್ರ (RTC)
ಆಧಾರ್ ಕಾರ್ಡ್ ಪ್ರತಿ
ಬ್ಯಾಂಕ್ ಪಾಸ್ ಬುಕ್ ಪ್ರತಿ

ನಿಬಂಧನೆಗಳು:-
ಯೋಜನೆಯ ಲಾಭ ಪಡೆಯಲು ಕೃಷಿಕರು ಕನಿಷ್ಠ ಒಂದು ಎಕರೆ ಭೂಮಿಯ ಮಾಲೀಕತ್ವ ಹೊಂದಿರಬೇಕು. ಗರಿಷ್ಠ ಮಿತಿಯ ನಿರ್ಬಂಧ ಇರುವುದಿಲ್ಲ.

ಯೋಜನೆಯನ್ನು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಹಾಗೂ ಆರಿಗ್ರಾಫ್ DLT ಸಂಸ್ಥೆಯ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಕಾರ್ಬನ್ ಕ್ರೆಡಿಟ್ ಯೋಜನೆಯ ಫಲಾನುಭವಿಯಾಗಲು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಪ್ರಾರ್ಥಮಿಕ ಸದಸ್ಯತ್ವ ಪಡೆದುಕೊಳ್ಳುವುದು ಕಡ್ಡಾಯ. ಸದಸ್ಯತ್ವ ನೋಂದಣಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ.

ಕಾರ್ಬನ್ ಕ್ರೆಡಿಟ್ ಯೋಜನೆಯ ಹೆಚ್ಚಿನ ವಿವರಗಳಿಗಾಗಿ ಹಾಗೂ ದಾಖಲೆ ಸಲ್ಲಿಕೆಗೆ ಕೆಳಗಿನ ದೂರವಾಣಿ ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಲು ಸಂಘಟಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸುಬ್ರಮಣ್ಯ ಜೋಯಿಸ್: 9945103337 ಇವರನ್ನ ಸಂಪರ್ಕಿಸಬಹುದಾಗಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";