ಕೃಷಿ ಜಂಟಿ ನಿರ್ದೇಶಕರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸಿದ ರೈತರು

News Desk

ಚಂದ್ರಳ್ಳಿ ನ್ಯೂಸ್, ಚಿತ್ರದುರ್ಗ:
ಕೃಷಿ ಜಂಟಿ ನಿರ್ದೇಶಕರ ಕಾರ್ಯ ವೈಖರಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕೃಷಿ ಜಂಟಿ ನಿರ್ದೇಶಕರು ಸೇರಿದಂತೆ ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ರೈತರ ಬಗ್ಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದಾರೆ. ಬೀಜ ಗೊಬ್ಬರ ಕಳೆಪೆ ಬಗ್ಗೆ ರೈತರು ದೂರು ನೀಡಿದರೆ ಏನು ಕ್ರಮ ಕೈಗೊಳ್ಳುತ್ತಿಲ್ಲ. ರೈತರು ಕಚೇರಿಗೆ ಹೋದಾಗ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು ಇವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದರು.

- Advertisement - 

ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಮುಂದೆ ಈಗಾಗಲೇ ಚಳುವಳಿ ಮಾಡಲಾಗಿತ್ತು. ಚಳುವಳಿ ಮಾಡಿದವರನ್ನು ಗೂಂಡಾಗಳು ಎಂದು ಹೇಳಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಯಿತು.

ಇದೆ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರು ಜಿಲ್ಲೆಯಲ್ಲಿ ಒಂದೇ ಒಂದು ಗೊಬ್ಬರದ ಅಂಗಡಿಗಳಿಗೆ ಹೋಗಿ ಪರಿಶೀಲನೆ ಮಾಡಿಲ್ಲ.

- Advertisement - 

ಗೊಬ್ಬರ ಅಂಗಡಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ರೈತರನ್ನು ಅಲೆದಾಡಿಸುತ್ತಿದ್ದಾರೆ ಎಂದು ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಆರೋಪಿಸಿದರು.

ಜಿಲ್ಲಾಧ್ಯಕ್ಷ ಡಿ ಎಸ್ ಹಳ್ಳಿ ಮಲ್ಲಿಕಾರ್ಜುನ್, ಕಾರ್ಯದರ್ಶಿ ಮರ್ಲ್ಲಹಳ್ಳಿ ರವಿಕುಮಾರ್, ಬಾಗೇನಾಳ್ ತಿಪ್ಪೇಸ್ವಾಮಿ, ಎಸ್ ಆರ್ ತಿಮ್ಮಯ್ಯ, ನಾಗರಾಜ್, ಮುದ್ದಾಪುರ ನಾಗಣ್ಣ, ಎಲ್ ಬಸವರಾಜಪ್ಪ, ಅಳಿಯೂರು ಸಿದ್ದಣ್ಣ, ರಾಮರೆಡ್ಡಿ, ಚಿಕ್ಕಪ್ ಗೆರೆ ರಾಜಣ್ಣ, ಬಾಗೇನಾಳ್ ಬಸಪ್ಪ, ಲಕ್ಷ್ಮಿಕಾಂತ್, ಸೂರಪ್ಪ ನಾಯಕ, ಟಿ ವೆಂಕಟೇಶ್, ತಿಮ್ಮೇಶ್ ತಿರುಮಲಾಪುರ, ಸಿದ್ದರಾಮಣ್ಣ ಹೊಳಲ್ಕೆರೆ, ಹಾಡನೂರು ಶಿವಕುಮಾರ್, ವೀರಣ್ಣ ಹೊಸಳ್ಳಿ ಮುಂತಾದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Share This Article
error: Content is protected !!
";