ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲೂಕಿನ ಕ್ಯಾದಿಗುಂಟೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರ ವಿರುದ್ಧ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಿಸಾನ್ ಘಟಕ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಿಸಾನ್ ನಾಗರಾಜ್.ಎ ಪರಶುರಾಂಪುರ ಮಾತನಾಡಿ, ರೈತರ ಸಮಸ್ಯೆಗಳಾದ ಬೆಳೆ ವಿಮೆ ಬೆಳೆ ಸಾಲ ರಿನಿವಲ್ ಇಕೆವೈಸಿ ವ್ಯವಸ್ಥಾಪಕರು ಪ್ರತಿಯೊಂದು ಹೊರಗಡೆಯಿಂದ ಫಾರಂ ಗಳನ್ನು ತರಿಸುತ್ತಿರುವುದು ಪಿ ಎಂ ವಿಶ್ವಕರ್ಮ ಸಾಲ ಸೌಲಭ್ಯವನ್ನು ತರಬೇತಿ ಪಡೆದಂತಹ ಮಹಿಳೆಯರಿಗೆ ಕೊಡದಿರುವುದು ಮಹಾಲಕ್ಷ್ಮಿ ಹಣ ಮತ್ತು ವೃದ್ಯಾಪ್ಯ ವೇತನಗಳ ಪೆನ್ಷನ್ ಹಣವನ್ನು ಸಬೂಬು ಹೇಳಿ ಹಣ ಕೊಡದಿರುವುದು ಹಾಗೂ
ಬ್ಯಾಂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇತ್ತೀಚೆಗೆ ಟೊಮ್ಯಾಟೊ ಮತ್ತು ದಾಳಿಂಬೆ ಬೆಳೆಗಳಾದಂತಹ ತೋಟಗಾರಿಕ ಬೆಳೆಗಳನ್ನು ಬೆಳೆದು ಬೆಂಗಳೂರಿನ ಮಾರುಕಟ್ಟೆಗೆ ಮಾರಿ ಬಂದಂತಹ ಹಣವನ್ನು ಬ್ಯಾಂಕಿಗೆ ಹಾಕಿ ಊರಿಗೆ ಬಂದು ಹಣವನ್ನು ಬಿಡಿಸಿಕೊಂಡು ಬರಲು ಹೋದರೆ ಬ್ಯಾಂಕಿನಲ್ಲಿ ಕ್ಯಾಶ್ ಇಲ್ಲ ಎಂದು ಬೇಜಾರ್ ಉತ್ತರ ಕೊಡುತ್ತಾರೆ.
ಕೆಲವೊಂದು ಸಲ ಹಣ ಕಟ್ಟಲು ಹೋದರೂ ಕೂಡ ಇದೇ ಮಾದರಿಯ ಉತ್ತರವನ್ನು ನೀಡುತ್ತಾರೆ. ದೀನ ದಲಿತರಿಗೆ ಹಿಂದುಳಿದ ವರ್ಗಕ್ಕೆ ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯಗಳನ್ನು ನೀಡದೆ ದುರಹಂಕಾರದಿಂದ ವರ್ತಿಸುತ್ತಿರುವ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದು ಕೊಂಡರು.
ರೈತ ಪರ ಕೆಲಸ ಮಾಡುವುದಾದರೆ ಮಾಡಿ ಇಲ್ಲವೇ ತಕ್ಷಣವೇ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ನಾಗರಾಜ್ ಒತ್ತಾಯಿಸಿದರು.
ಪ್ರತಿಭಟನೆ ನಡೆಸುತ್ತಿರುವುದನ್ನು ತಿಳಿದು ಸ್ಥಳಕ್ಕೆ ತಕ್ಷಣವೇ ಧಾವಿಸಿ ಬಂದ ಜಗನ್ನಾಥ್ ಮಾತನಾಡಿ ಬ್ಯಾಂಕ್ ಇರುವುದೇ ರೈತರು, ವ್ಯಾಪಾರಸ್ಥರು ಮತ್ತು ಧ್ವನಿ ಇಲ್ಲದವರಿಗಾಗಿ. ಹಾಗಾಗಿ ನಮ್ಮ ಬ್ಯಾಂಕ್ ಅವರೊಂದಿಗೆ ಸದಾ ಇರುತ್ತದೆ ಎಂದು ಹೇಳಿ ಮೇಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಡಲಾಗುವುದು ಎಂದು ತಿಳಿಸಿ ತಕ್ಷಣವೇ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಗೆ ಬ್ಯಾಂಕಿನ ಗ್ರಾಹಕರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ನಿರ್ದೇಶಿಸಿದರು,
ಪ್ರತಿಭಟನಾಕಾರರು ಮೇಲಾಧಿಕಾರಿ ನೀಡಿದ ಭರವಸೆ ಮೇರೆಗೆ ಗೌರವ ಕೊಟ್ಟು ಪ್ರತಿಭಟನೆ ಹಿಂಪಡೆಯುವುದಾಗಿ ತಿಳಿಸಿದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ ರೈತರಿಗೆ ಗೌರವ ಕೊಡುವುದನ್ನು ಅಧಿಕಾರಿಗಳು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ರೈತರು ಮತ್ತು ರೈತ ಮುಖಂಡರಾದ ವೆಂಕಟರಮಣಪ್ಪ, ಮಹದೇವಪುರದ ತ್ಯಾಗರಾಜ್, ರಾಜಕುಮಾರ, ಮುತ್ತುರಾಜ್, ಗ್ರಾಮ ಪಂಚಾಯತ್ ಸದಸ್ಯ ಕ್ಯಾದಿಗುಂಟೆ ಶಶಿಕುಮಾರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಕ್ಯಾದಿಗುಂಟೆ ರೈತ ಸಂಘದ ಪಂಚಾಯತ್ ಅಧ್ಯಕ್ಷ ತಿಮ್ಮರಾಜು, ದಲಿತ ಮುಖಂಡ ರಾಮಾಂಜನಿ, ಸಿದ್ದೇಶ್ವರನ ದುರ್ಗಾ ಟಿಎಲ್ಡಿ ಬ್ಯಾಂಕ್ ನಿರ್ದೇಶಕ ಜಲ್ದೀರಪ್ಪ, ರೈತ ರಾಜಣ್ಣ, ತಾಲೂಕು ಉಪಾಧ್ಯಕ್ಷ ಕ್ಯಾದಿಗುಂಟೆ ರಮೇಶ್, ಪಿಲ್ಲಹಳ್ಳಿಯ ದಲಿತ ಮಹಿಳೆಯರು, ಗೌರಿಪುರದ ದಲಿತ ಮುಖಂಡ ಬದ್ರಿನಾಥ್ ಹೀಗೆ ಸುಮಾರು ಹಳ್ಳಿಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

