ಜನವರಿ-18 ರಂದು ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶನಕ್ಕೆ ಸಿದ್ಧರಾದ ರೈತರು

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಕೆರೆ, ಕಟ್ಟೆಗಳಿಗೆ ನೀರು ಭರ್ತಿ ಮಾಡುವಂತೆ ಹೋರಾಟ ಮಾಡುತ್ತಿರುವ ರೈತರಿಗೆ ತಾಲೂಕು ವಕೀಲರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಹಿರಿಯೂರು ತಾಲೂಕು ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಭೇಟಿ ನೀಡಿ ರೈತರ ಜೊತೆ ಕೈಜೋಡಿಸಿದರು.

 ಹಿರಿಯ ವಕೀಲರು ಶಿವಶಂಕರ್ ಮೂರ್ತಿ ಮಾತನಾಡಿ 204 ದಿನದಿಂದ ಕೆರೆಗಳಿಗೆ ನೀರು ಹರಿಸಬೇಕು ಎಂದು ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಶಾಸಕರು ಹಾಗೂ ಜಿಲ್ಲಾ ಸಚಿವರು ಡಿ ಸುಧಾಕರ್ ಇತ್ತ ಬಾರದೆ ಇರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ತಮ್ಮ ಬದುಕುಗಳನ್ನು ಬಿಟ್ಟು ಬೀದಿಯಲ್ಲಿ ಕೂತು ಚಳುವಳಿ ನಡೆಸುತ್ತಿದ್ದರೆ ಇದನ್ನು ಗಮನಿಸದೆ ಹತ್ತಾರು ಬಾರಿ ಇಲ್ಲೇ ಓಡಾಡಿದರು ಧರಣಿ ಸ್ಥಳಕ್ಕೆ ಬಂದು ರೈತರೊಂದಿಗೆ ಸೌಜನ್ಯಕ್ಕಾದರೂ ಮಾತನಾಡಿ ಸಂಬಂಧಪಟ್ಟ ಸಚಿವರೊಂದಿಗೆ ರೈತರ ಸಮಸ್ಯೆಗಳನ್ನು ಆಲಿಸಿ ರೈತರ ಸಮಸ್ಯೆ ಬಗೆಹರಿಸಬೇಕಾದ ಸಚಿವರು ರೈತರನ್ನು ಕಡೆಗಣಿಸುತ್ತಿರುವುದು ಸಮಂಜಸವಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು, ಈ ಕ್ಷೇತ್ರದ ಶಾಸಕರಾಗಿ ರೈತರ ಹೋರಾಟ ನಡೆಸುತ್ತಿದ್ದರು ರೈತರ ಸಮಸ್ಯೆ ಕೇಳದೆ ಇರುವುದು ಕ್ಷೇತ್ರದ ಶಾಸಕರಿಗೆ ಏನೆಂದು ಹೇಳುವುದು ತಿಳಿಯುತ್ತಿಲ್ಲ.

ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ರೈತರ ಸಮಸ್ಯೆಯನ್ನು ಸಂಬಂಧಪಟ್ಟ ಸಚಿವರ ಬಳಿ ಕರೆದುಕೊಂಡು ಹೋಗಿ ರೈತರ ಮುಖಮುಖಿ ಮಾತನಾಡಿಸಿ ಸಮಸ್ಯೆಗೆ ಉತ್ತರ ಕೊಡಿಸಬಹುದಿತ್ತು. ತಾಲೂಕಿನ ರೈತರ ಬಗ್ಗೆ ಗೌರವವಿದ್ದರೆ ರೈತರ ಬಳಿ ಬಂದು ಸಮಸ್ಯೆ ಬಗೆರಿಸಲಿ ಎಂದು ಹೇಳಿದರು.

  ವಕೀಲರಾದ ಸುರೇಶ್ ಮಾತನಾಡಿ ಸರ್ಕಾರ ನೀರು ಹಂಚಿಕೆ ಎಂಬ ನವ ಹೇಳುತ್ತಾ ಜಾರಿಕೊಳ್ಳುತ್ತಿದೆ. 30 ಟಿಎಂಸಿ ಜಲಾಶಯದಲ್ಲಿ ಅರ್ಧ ಟಿಎಂಸಿ ನೀರನ್ನು ಈ ಭಾಗದ ಕೆರೆಗಳಿಗೆ ಡಿಪಿಆರ್ ಮಾಡಿಸಿ ಕೂಡಲೇ ಕಾಮಗಾರಿ ನಡೆಸಿ ರೈತರಿಗೆ ನೀರು ಕೊಡುವಂತ ಕೆಲಸ ಮಾಡಬೇಕು ಎಂದು ತಿಳಿಸಿದರು. ವಕೀಲರು ದಯಾನಂದ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ನಮ್ಮ ತಾಲೂಕಿನ ಜನ ಮೈ ಮರೆತು ಇಂಥವರನ್ನ ಆಯ್ಕೆ ಮಾಡಿರುವುದು ನಮ್ಮ ತಾಲೂಕಿನ ದುರ್ಗತಿ ಎಂದರು.

 ರೈತರು ಬೀದಿಯಲ್ಲಿ ಕೂತು ಹೋರಾಟ ಮಾಡಿದರು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಈ ಹೋಬಳಿಯ ಎಲ್ಲಾ ಗ್ರಾಮದಿಂದಲೂ ರೈತರು ಸಂಘಟಿತರಾಗಿ ನೀರು ಬರುವತನಕ ನಿರಂತರ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ ಈ ಭಾಗದಲ್ಲಿ ಅತಿ ಕಡಿಮೆ ಮಳೆ ಬೀಳುವುದರಿಂದ ಎಲ್ಲ ಕೆರೆಕಟ್ಟೆಗಳು ಖಾಲಿಯಾಗಿ ಜನಜಾನುವಾರುಗಳು ಮತ್ತು ತೋಟ ತೊಡಕಿಗಳನ್ನು ಉಳಿಸಿಕೊಳ್ಳಲು ತುಂಬಾ ಕಷ್ಟಕರವಾಗಿದೆ ಎಂದರು.

ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಶಾಸಕರು ಮತ್ತು ಎಲ್ಲ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡಬೇಕು ಮುಂದಿನ ಹೋರಾಟದಲ್ಲಿ ಎಲ್ಲಾ ಸಂಘಟನೆ ಒಗ್ಗೂಡಿಸಿ  ಹೋರಾಟಕ್ಕೆ ಮುಂದಾಗಬೇಕು. ರೈತಪರ ವಕೀಲರ ಸಂಘ ಸದಾ ನಿಲ್ಲುತ್ತದೆ. ಹಿರಿಯೂರು ಬಂದ್ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ಬಂದ್ ಹೋರಾಟದಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದರು.

ರೈತರ ಹೋರಾಟ ನಡೆಸುತ್ತಿದ್ದರು ರೈತರ ಬಳಿ ಹೋಗಿ ರೈತರ ಸಮಸ್ಯೆಗಳನ್ನು ಆಲಿಸದೇ ಇರುವ ಸಚಿವರ ವಿರುದ್ಧ ಹಾಗೂ ತಾಲೂಕಿನ ಜೆಜೆ ಹಳ್ಳಿ ಹೋಬಳಿಯ ಹಾಗೂ ವಿವಿ ಸಾಗರ ಗ್ರಾಮ ಪಂಚಾಯತಿಯ ಕೆರೆಗಳಿಗೆ ವಿ ವಿಸಾಗರ ಜಲಾಶಯದಿಂದ ಕೆರೆಗಳನ್ನ ತುಂಬಿಸುವಂತೆ ಹೋರಾಟ ನಡೆಸುತ್ತಿದ್ದರು ರೈತರನ್ನ ಕಡೆಗಣಿಸಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ವಿರುದ್ಧ ಮುಖ್ಯಮಂತ್ರಿಗಳು ಎದುರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಅಷ್ಟುರೊಳಗೆ ಸಚಿವರು ರೈತರ ಸಮಸ್ಯೆಗೆ ಸ್ಪಂದಿಸಿ ಎಲ್ಲಾ ಕೆರೆಗಳಿಗೂ ನೀರು ಹರಿಸುವ ಯೋಜನೆ ಕಾರ್ಯರೂಪಕ್ಕೆ ತಂದರೆ ಸಚಿವರಿಗೆ ತಾಲೂಕಿನ ರೈತರು ಸಚಿವರಿಗೆ ಗೌರವಿಸಲಾಗುವುದು ಇಲ್ಲದಿದ್ದರೆ ಮುಖ್ಯಮಂತ್ರಿಗಳಿಗೆ ಎದುರೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುತ್ತದೆ.
ಕೆಟಿ ತಿಪ್ಪೇಸ್ವಾಮಿ, ಅಧ್ಯಕ್ಷರು, ತಾಲೂಕು ರೈತ ಸಂಘ, ಹಿರಿಯೂರು.

ರೈತ ಸಂಘದ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಸಿದ್ದರಾಮಣ್ಣ ರೈತ ಮುಖಂಡರು ಹಾಗೂ ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ ಉಪಾಧ್ಯಕ್ಷರಾದ ಬೀನಾ ರಾಣಿ ಪ್ರಧಾನ ಕಾರ್ಯದರ್ಶಿ, ಜೀ ಚಿತ್ರಲಿಂಗಪ್ಪ ಮಾಜಿ ಅಧ್ಯಕ್ಷರಾದ ಶಿವಶಂಕರಮೂರ್ತಿ ಸಚಿವರಂಗನಾಥ್ ಟಿ ಪಾಂಡುರಂಗಯ್ಯ  ಕೆ ವಿ ದಯಾನಂದ ವಕೀಲರಾದ ಎಂ ಟಿ ಸುರೇಶ್  ಸಂಜಯ್ ಎಸ್ ಕೆ ರಾಘವೇಂದ್ರ ಈರಣ್ಣ ಸುರೇಶ್ ಬಸವರಾಜ್ ಧ್ರುವ ಕುಮಾರ್ ಲಕ್ಷ್ಮಣ್ ಮೂರ್ತಿ ಸಣ್ಣಪ್ಪ ಲಕ್ಷ್ಮಿ ಬಾಬು ಕಾಮುಟ ತಿಪ್ಪೇಸ್ವಾಮಿ ಮಹಮ್ಮದ್ ರಫೀಕ್ ರಾಜ ನಾಯಕ ಅಜಯ್  ಭಾಗಿವಹಿಸಿದ್ದರು.

 

- Advertisement -  - Advertisement - 
Share This Article
error: Content is protected !!
";