ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಹಿಂಡಿಸಕಟ್ಟೆ ಬೆಸ್ಕಾಂ ಸ್ಟೇಷನ್ ಬಳಿ ಬೆಸ್ಕಾಂ ಎಇಇ ಕಾರು ಅಡ್ಡಗಟ್ಟಿ ಸಮಯಕ್ಕೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ತ್ರೀ ಫೇಸ್ ನೀಡುತ್ತಿಲ್ಲ ಎಂದು ರೈತರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಯಲ್ಲದಕೆರೆ, ಹಾಲ್ ಮ್ಯಾದನಹಳ್ಳಿ, ಶೇಷಪ್ಪನಹಳ್ಳಿ ಸುತ್ತಮುತ್ತ ಗ್ರಾಮಗಳಿಗೆ ತ್ರೀ ಫೇಸ್ ವಿದ್ಯುತ್ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದರು.
ಕೆಲವು ವಿದ್ಯುತ್ ಕಂಬಗಳು ದುರಸ್ತಿಯಲ್ಲಿದ್ದರೂ ಹಲವು ಬಾರಿ ಮನವಿ ಮಾಡಿದರು ಅಧಿಕಾರಿಗಳು ಸರಿಪಡಿಸಿಲ್ಲ ಏನಾದರೂ ದುರಂತ ನಡೆದರೆ ಅಧಿಕಾರಿಗಳೇ ಹೊಣೆಗಾರರಾಗಬೇಕೆಂದು ರೈತರು ಪ್ರತಿಭಟನೆ ಸಂದರ್ಭದಲ್ಲಿ ಎಚ್ಚರಿಸಿದರು.
ತ್ರೀ ಫೇಸ್ ವಿದ್ಯುತ್ ಸಮಯಕ್ಕೆ ಸರಿಯಾಗಿ ನೀಡದಿದ್ದರೆ ರೈತರ ಬೆಳೆದ ಬೆಳೆಗಳು ಹಾಳಾಗುತ್ತವೆ ಇದನ್ನು ಅರ್ಥ ಮಾಡಿಕೊಳ್ಳದ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷತನದಿಂದ ರೈತರ ಬದುಕು ನಶಿಸಿಹೋಗುತ್ತದೆ ಸಮಯಕ್ಕೆ ಸರಿಯಾಗಿ ವಿದ್ಯುತ್ ತ್ರೀ ಫೇಸ್ ನೀಡಿದರೆ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷೆ ಮಾಡಿದರೆ ಹಿರಿಯೂರು ಬೆಸ್ಕಾಂ ಇಲಾಖೆ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ ಸುತ್ತಮುತ್ತ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

