ಚಂದ್ರಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಉಡುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತ ಮುಖಂಡರೊಂದಿಗೆ ಉಡುವಳ್ಳಿ ಕೆರೆಗೆ ನೀರು ಹರಿಸುವಂತೆ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಉಡುವಳ್ಳಿ ಕೆರೆ ಸೇರಿದಂತೆ ಕಲ್ಲುವಳ್ಳಿ ಭಾಗದ ಕೆರೆಗಳಿಗೆ ನೀರು ಹರಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಇವರೊಂದಿಗೆ ಚರ್ಚಿಸಿ, ಆದಷ್ಟು ಶೀಘ್ರವಾಗಿ ಕಾಮಗಾರಿಗೆ ಚಾಲನೆ ನೀಡುವುದಾಗಿ ಸಚಿವ ಸುಧಾಕರ್ ಭರವಸೆ ನೀಡಿದರು.
ಕಲ್ಲುವಳ್ಳಿ ಭಾಗ ಸೇರಿದಂತೆ ಇಡೀ ಹಿರಿಯೂರು ವಿಧಾನಸಭಾ ಕ್ಷೇತ್ರದ ಎಲ್ಲ ಭಾಗಗಳಿಗೆ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸಬೇಕೆಂಬುದೇ ನನ್ನ ಆಸೆಯಾಗಿದೆ ಎಂದು ರೈತ ಮುಖಂಡರಿಗೆ ಸಚಿವರು ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ಯಲ್ಲದಕೆರೆ ಮಾರುತಪ್ಪ, ಎಂ ಮಹಲಿಂಗಪ್ಪ, ಸೋಮಣ್ಣ, ಶ್ಯಾಮು, ಲಕ್ಷ್ಮಿಕಾಂತ್, ಹುಲಿ ರಂಗನಾಥ್, ಶಬುದ್ದೀನ್, ಈರಣ್ಣ, ಬಾಲರಾಜ್, ದಾಸಪ್ಪ, ಪಾಂಡುರಂಗಪ್ಪ, ರಾಮಣ್ಣ, ರಂಗಸ್ವಾಮಿ, ಕರಿಯಣ್ಣ, ದೇವರಾಜ್, ಸೀನಪ್ಪ, ರಾಜೇಶ್, ಶಿವಣ್ಣ, ಬಾನಿ ರಂಗಣ್ಣ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

