ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ಐಮಂಗಳ ಹೋಬಳಿ ಸೊಂಡೆಕೆರೆ ಗ್ರಾಮದ ರಿ ಸರ್ವೇ ನಂ 35 ಹಾಗೂ 32ರ ಆ ಗ್ರಾಮದ sc/st ಸಮುದಾಯದವರ ಹೆಸರಿಗೆ 1991/92ರಲ್ಲಿ ಸರ್ಕಾರವು ಮಂಜೂರಾತಿ ಆದೇಶ ನೀಡಿರುತ್ತದೆ.
1998/99ರಲ್ಲಿ ಸಾಗುವಳಿ ಚೀಟಿಗಳನ್ನು ಪಡೆದು ಕಾನೂನುನಾತ್ಮಕವಾಗಿ ಖಾತೆ ಕಂದಾಯ ಪಹಣಿ, ಪಟ್ಟಾಗಳನ್ನು ಹೊಂದಿ ಭೂ ಕಂದಾಯ ಪಾವತಿಸಿ ಸುಮಾರು 20 ವರ್ಷಗಳ ಕಾಲ ಸ್ವಾದೀನ ಅನುಭವದಲ್ಲಿದ್ದು ವ್ಯವಸಾಯ ಮಾಡಿರುತ್ತಾರೆ.
ಇತ್ತೀಚ್ಚಿಗೆ ಸದರಿ ಗ್ರಾಮದ ಕೆಲವರು ಈ ವ್ಯವಸಾಯ ಭೂಮಿಯು ದಲಿತರಿಗೆ ಸೇರಿದ್ದಲ್ಲಾ ಅರಣ್ಯ ಇಲಾಖೆಗೆ ಸೇರಿದೆದ್ದೆಂದು ಖಾತೆ ಇರುವ ದಲಿತರು ಜಮೀನು ವ್ಯವಸಾಯ ಮಾಡದಂತೆ ಅತಿಕ್ರಮ ಪ್ರವೇಶ ಮಾಡಿ ದಲಿತರ ಜಮೀನುಗಳಲ್ಲಿ ಗುಂಡಿ ತೆಗೆದು ಮಣ್ಣು ಸಾಗಾಟ ಮಾಡಿರುತ್ತಾರೆ ಹಾಗೂ ದಲಿತರ ಜಮೀನುಗಳಲ್ಲಿ ಅಕ್ರಮವಾಗಿ ಬೋರ್ ವೆಲ್ ಗಳನ್ನು ಕೊರೆದು ತಮ್ಮ ಸ್ವಂತ ಜಮೀನುಗಳಿಗೆ ನೀರು ಹರಿಸಿ ಕೊಳ್ಳುತ್ತಿದ್ದಾರೆ.
ಕೇಳಲು ಹೋದ ದಲಿತರ ಆಸ್ತಿ ಪಾಸ್ತಿ ನಷ್ಟಮಾಡಿ ದೌರ್ಜನ್ಯ ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಮಹಾನಾಯಕ ದಲಿತಸೇನೆ ಸಂಘಟನೆಯ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ನೀಡಿ ಒತ್ತಾಯ ಮಾಡಲಾಯಿತು.
ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ. ಶ್ರೀನಿವಾಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ ಕೆ ಸಾಕ್ಯ, ಜಮೀನಿನ ಮಾಲೀಕರಾದ ಕೆಂಚಪ್ಪ, ಕಾವ್ಯ ಇದ್ದರು.