ಫಸಲ್ ಭಿಮಾ ಯೋಜನೆ ನೋಂದಣಿ ಪ್ರಾರಂಭ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನಲ್ಲಿ 2024-25ನೇ ಸಾಲಿನ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಗೆ ವಿವಿಧ ಬೆಳೆಗಳಿಗೆ ಬೆಳೆ ವಿಮೆ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.ಹಿರಿಯೂರು ತಾಲ್ಲೂಕಿಗೆ ಗ್ರಾಮ ಪಂಚಾಯತಿ ಮಟ್ಟಕ್ಕೆ ಕಡಲೆ (ಮಳೆಯಾಶ್ರಿತ) ಹಾಗೂ ಜೋಳ (ಮಳೆಯಾಶ್ರಿತ) ಬೆಳೆಗಳನ್ನು ಹಿಂಗಾರು ಹಂಗಾಮಿಗೆ ಅಧಿಸೂಚನೆ ಮಾಡಲಾಗಿದೆ.

ಉಳಿದಂತೆ ಹಿರಿಯೂರು ಕಸಬಾ ಹೋಬಳಿ ಮಟ್ಟದ ವಿಮಾ ಘಟಕಕ್ಕೆ ಕುಸುಬೆ (ಮ.ಆ) ಮುಸುಕಿನ ಜೋಳ (ಮ.ಆ), ರಾಗಿ (ನೀ), ಸೂರ್ಯಕಾಂತಿ (ಮ.ಆ), ಹುರುಳಿ (ಮ.ಆ) ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ.

ಐಮಂಗಲ ಹೋಬಳಿ ಮಟ್ಟದ ವಿಮಾ ಘಟಕಕ್ಕೆ ಈರುಳ್ಳಿ (ನೀ), ಗೋಧಿ (ನೀ), ಕುಸುಬೆ (ಮ.ಆ) ಮುಸುಕಿನ ಜೋಳ (ನೀ), ಮುಸುಕಿನ ಜೋಳ (ಮ.ಆ), ರಾಗಿ (ನೀ) ಸೂರ್ಯಕಾಂತಿ (ಮ.ಆ), ಹುರುಳಿ (ಮ.ಆ) ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ.                            

ಜೆ.ಜಿ ಹಳ್ಳಿ ಹೋಬಳಿ ಮಟ್ಟದ ವಿಮಾ ಘಟಕಕ್ಕೆ ಈರುಳ್ಳಿ (ನೀ), ಕುಸುಬೆ (ಮ.ಆ), ಹುರುಳಿ (ಮ.ಆ) ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ.

ಧರ್ಮಪುರ ಹೋಬಳಿ ಮಟ್ಟದ ವಿಮಾ ಘಟಕಕ್ಕೆ ಭತ್ತ (ನೀ), ಸೂರ್ಯಕಾಂತಿ (ನೀ) ಸೂರ್ಯಕಾಂತಿ (ಮ.ಆ), ಹುರುಳಿ (ಮ.ಆ) ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ.

 2024ರ ಹಿಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ನಿಗಧಿಪಡಿಸಲಾಗಿರುವ ರೈತರ ವಿಮಾ ಕಂತಿನ ವಿವರ- ಹುರುಳಿ (ಮ.ಆ) ನ.15, ಜೋಳ (ಮ.ಆ) ನ.30, ರಾಗಿ (ಮ.ಆ) ನ.30, ಸೂರ್ಯಕಾಂತಿ (ನೀ) ನ.30, ಸೂರ್ಯಕಾಂತಿ (ಮ.ಆ) ನ.30, ಕುಸುಮೆ (ಮ.ಆ) ನ.30, ಈರುಳ್ಳಿ (ನೀ) ನ.30, ಭತ್ತ (ನೀ) ಡಿಸೆಂಬರ್-16, ಕಡಲೆ (ಮ.ಆ) ಡಿ.16, ಗೋಧಿ (ನೀ) ಡಿ.16, ಮು.ಜೋಳ (ಮ.ಆ) ಡಿ.16, ಮು.ಜೋಳ (ನೀ)   ಡಿ.16 ನೊಂದಣಿ ಮಾಡಿಕೊಳ್ಳಲು ಕೊನೆ ದಿನವಾಗಿದೆ.

ಷರಾ: ವಿಮಾ ಮೊತ್ತವು ಬೆಳೆಸಾಲ ಪಡೆಯುವ ಮತ್ತು ಬೆಳೆಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಆಸಕ್ತ ರೈತ ಭಾಂದವರು ನಿಗದಿತ ದಿನಾಂಕದೊಳಗೆ ಬೆಳೆ ವಿಮೆಗೆ ನೊಂದಣಿ ಮಾಡಿಕೊಳ್ಳಲು ಕೃಷಿ ಅಧಿಕಾರಿಗಳು ವಿನಂತಿಸಿದ್ದಾರೆ.

ಅಂತಿಮ ಸಮಯದಲ್ಲಿ ಜನದಟ್ಟಣೆಯಿಂದಾಗಿ ನೊಂದಣಿಯಲ್ಲಿ ತಪ್ಪುಗಳು ಆಗುವ ಸಂಭವವಿರುತ್ತದೆ. ಆದ್ದರಿಂದ ಸಕಾಲದಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಎಂ.ವಿ ಮಂಜುನಾಥ್ ಮನವಿ ಮಾಡಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";