ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಫಾಸ್ಟ್ ಫುಡ್ ತಯಾರಿಕೆ ಮತ್ತು ಮಾರಾಟ ಕ್ಷೇತ್ರದಲ್ಲಿ(Free fast food training)ಸ್ವಂತ ಉದ್ದಿಮೆಯನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರದಿಂದ ಉಚಿತ ಫಾಸ್ಟ್ ಫುಡ್ ಉದ್ದಿಮೆ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಫಾಸ್ಟ್ ಫುಡ್(Fast food training) ಸ್ಟಾಲ್ ಉದ್ಯಮಿ ಕ್ಷೇತ್ರವು ಉತ್ತಮ ಆದಾಯ ತರಬಲ್ಲ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ದಿನೇ ದಿನೇ ಬೇಡಿಕೆ ಏರುಗತಿಯಲ್ಲಿ ಸಾಗುತ್ತಿದ್ದು ಈ ವಿಭಾಗದಲ್ಲಿ ಸ್ವಂತ ಉದ್ದಿಮೆ ಪ್ರಾರಂಭಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡು ತರಬೇತಿಯಲ್ಲಿ ಭಾಗವಹಿಸಬಹುದು.
ಅರ್ಹರು: ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು. ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರುವುದು ಕಡ್ಡಾಯ. ಗ್ರಾಮೀಣ ಭಾಗದಲ್ಲಿ ವಾಸಿರುವ ಬಿಪಿಎಲ್ ಕಾರ್ಡ ಹೊಂದಿರುವ ಅಭ್ಯರ್ಥಿಗಳಿಗೆ ತರಬೇತಿಯಲ್ಲಿ ಭಾಗವಹಿಸಲು ಆದ್ಯತೆ ನೀಡಲಾಗುತ್ತದೆ ಎಂದು ತರಬೇತಿ ನೀಡುವ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ 12 ದಿನ ನಡೆಯಲಿದ್ದು, ತರಬೇತಿಯಲ್ಲಿ ಬಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ ಮತ್ತು ತರಬೇತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ.
ಬ್ಯಾಂಕ್ ಮೂಲಕ ಸಾಲ ಸೌಲಭ್ಯ:
ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ತರಬೇತಿಯಲ್ಲಿ ಉಚಿತ ತರಬೇತಿ ನೀಡುವುದರ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಯಡಿ ಸ್ವ-ಉದ್ಯೋಗ ಪ್ರಾರಂಭಿಸಲು ಬ್ಯಾಂಕ್ ಮೂಲಕ ಸಹಾಯಧನದ ಸಾಲ ತೆಗೆದುಕೊಂಡು ಉದ್ಯಮಿ ಆರಂಭಿಸಬಹುದು.
ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪಾನಿಪುರಿ, ಮಸಾಲಪುರಿ, ಗೋಬಿ ಮಂಚೂರಿ, ಸಮೋಸ, ಕಚೋರಿ, ನೂಡಲ್ಸ್, ಕೇಕ್, ಪಪ್ಸ್ ಹಾಗೂ ಸಿಹಿ ತಿಂಡಿಗಳನ್ನು ತಯಾರಿಕೆ ಮಾಡುವ ವಿಧಾನದ ಕುರಿತು ತಿಳಿಸಿಕೊಡಲಾಗುತ್ತದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಆಸಕ್ತ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಎರಡು ವಿಧಾನ ಅನುಸರಿಸಿ ಅರ್ಜಿ ಸಲ್ಲಿಸಬಹುದು. ಒಂದು ಆನ್ಲೈನ್ ಮೂಲಕ ಎಲ್ಲಾ ವಿವರ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನೇರವಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ತರಬೇತಿ ಪ್ರಾರಂಭವಾಗುವ ದಿನ ಹಾಜರಾಗಬಹುದು ಅಥವಾ ಮುಂಚಿತವಾಗಿ ಹೆಸರು ನೋಂದಣಿ ಮಾಡಿಕೊಳ್ಳಲು ಈ ಮೊಬೈಲ್ 9449860007, 9538281989, 9916783825, 888044612 ಸಂಖ್ಯೆಗಳಿಗೆ ಸಂಪರ್ಕಿಸಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು Online Application Link- https://forms.gle/XD5NW2vABNaJw5iP8
ತರಬೇತಿ ಪ್ರಾರಂಭ ದಿನಾಂಕ: 21 ಜುಲೈ 2025 ರಿಂದ ಪ್ರಾರಂಭವಾಗಿ 01 ಆಗಸ್ಟ್ 2025ಕ್ಕೆ ಮುಕ್ತಾಯವಾಗಲಿದೆ.
ತರಬೇತಿ ನಡೆಯುವ ಸ್ಥಳ:
ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343 ಹೆಚ್ಚಿನ ಮಾಹಿತಿಗಾಗಿ: 9449860007, 9538281989, 9916783825, 888044612