ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಕೆರೆಗಳಿಗೆ ಬಿಡುತ್ತಿರುವುದರಿಂದ ಕುಡಿಯುವ ನೀರು ಹಾಗು ಬೆಳೆ ಬೆಳೆಯಲು ಯೋಗ್ಯವಲ್ಲದ ಸ್ಥಿತಿಗೆ ಈ ನೀರು ವಿಷ ವಾಗಿದೆ ಅದ್ದರಿಂದ ಶುದ್ಧ ನೀರಿಗಾಗಿ ಆಗ್ರಹಿಸಿ ಅಂಬೇಡ್ಕರ್ ಜಯಂತಿ ದಿನವೇ ಗ್ರಾಮಸ್ಥರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಅರ್ಕಾವತಿ ನದಿ ಹೋರಾಟ ಸಮಿತಿ ಮೂರನೇ ಹಂತದ ಶುದ್ಧೀಕರಣಕ್ಕಾಗಿ ನಗರದ ತಹಶೀಲ್ದಾರ್ ಕಛೇರಿ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರಾಸಾಯಿನಿಕ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡದೆ ನೇರವಾಗಿ ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಬಿಡುತ್ತಿರುವುದರಿಂದ. ಕೊಳವೆ ಬಾವಿ ಹಾಗು ಕೆರೆ ನೀರು ಯಾವುದಕ್ಕೂ ಯೋಗ್ಯ ಸ್ಥಿತಿಯಲ್ಲಿ ರುವುದರಿಂದ ನಮಗೆ ಶುದ್ದ ನೀರು ಕೊಡಿ ಎಂದು ಅರ್ಕಾವತಿ ನದಿಪಾತ್ರದ ಗ್ರಾಮಸ್ಥರು ಹಾಗು ಹೋರಾಟಗಾರರ ಆಕ್ರೋಶ ಕಾರಣವಾಗಿದೆ
ಇದೇ ವೇಳೆ.ಆರ್ಕಾವತಿ ಹೋರಾಟ ಸಮಿತಿ ಮುಖಂಡ ವಸಂತಕುಮಾರ್, ಮಾತನಾಡಿದ ನಮ್ಮ ಹೊಲ ಗದ್ದೆಗಳಿಗೆ ದನ ಕರುಗಳಿಗೆ ನಮ್ಮ ದಿನನಿತ್ಯ ಬಳಕೆಗೆ ಈ ಕೆರೆಯ ನೀರೇ ಆಶ್ರಯ ವಾಗಿತ್ತು ಅದರೆ ಈ. ದಿನ ನಮ್ಮ ಬದುಕು ನಾಶವಾಗಿ ಬೀದಿಗೆ ಬಂದಿದ್ದೇವೆ. ಅದರೆ ನಮ್ಮ ಸಂವಿಧಾನದಲ್ಲಿ ಸರ್ವರಿಗೂ ಸಮಾನತೆಯ ಹಕ್ಕಿನ ಹಾದಿ ತೋರಿಸಿ ಕೊಟ್ಟವರು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ನಾವು ಬಹಳ ಸಂಭ್ರಮದಿಂದ ಆಚರಣೆ ಮಾಡಬೇಕು.
ಆದರೆ ಈ ದಿನ ಸಂವಿಧಾನ ವಿರೋಧಿಯಾಗಿ ಕೆರೆಗಳಿಗೆ ತ್ಯಾಜ್ಯ ನೀರನ್ನು ಬಿಡುತ್ತಿದ್ದಾರೆ, ಇದರಿಂದ ದೊಡ್ಡ ತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಯ 17 ಗ್ರಾಮಗಳ ಜನರ ಕುಡಿಯುವ ನೀರನ್ನು ವಿಷ ಮಾಡಿದ್ದಾರೆ, ಜನರಿಗೆ ಕುಡಿಯಲು ಶುದ್ಧ ನೀರು ಕೊಡುವುದು ಸರ್ಕಾರದ ಕರ್ತವ್ಯ, ಶುದ್ಧ ನೀರನ್ನು ಕೇಳುವುದು ನಮ್ಮ ಹಕ್ಕು ಆ ಕಾರಣಕ್ಕಾಗಿ ನಾವು ಎಲ್ಲರೂ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿರುವುದ್ದಾಗಿ ಹೇಳಿದರು.
ಈ ಉಪವಾಸ ಸತ್ಯಾಗ್ರಹದ ಹೋರಾಟದಲ್ಲಿ ಗ್ರಾಮಸ್ಥರಾದ ವಿಜಿ ಕುಮಾರ್ ದೊಡ್ಡ ತುಮಕೂರು, ಮುನಿಕೃಷ್ಣಪ್ಪ, ಚನ್ನಕೇಶವ, ರಮೇಶ್, ಸತೀಶ್, ಮೂರ್ತಿ , ವಿಜಿ ಕುಮಾರ್ ದೊಂಬರಹಳ್ಳಿ, , ಮಂಜುನಾಥ್ ಭಾಗವಹಿಸಿದ್ದರು.