ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತದಲ್ಲಿ ಗೃಹ ಇಲಾಖೆ ಸಂಪೂರ್ಣ ನಿಷ್ಕ್ರೀಯವಾಗಿ ಬಿಟ್ಟಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ರಾಜ್ಯದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಲು ಭಯಪಡುವಂತಾಗಿದ್ದು, ಅತ್ಯಾಚಾರಿಗಳ, ಪುಂಡರ ಅಟ್ಟಹಾಸ ದಿನೇ ದಿನೇ ಮಿತಿ ಮೀರಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಕಾಂಗ್ರೆಸ್ಸಿಗರೇ, “ಗಾಂಧಿ ಭಾರತ” ಹೆಸರಲ್ಲಿ ಸಮಾವೇಶ ಮಾಡಿ ಬಿಟ್ಟಿ ಪ್ರಚಾರ ಪಡೆದರಷ್ಟೆ ಸಾಲದು! ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಆಶಯದಂತೆ ಮಧ್ಯರಾತ್ರಿಯಲ್ಲೂ ಹೆಣ್ಣುಮಕ್ಕಳು ಭಯವಿಲ್ಲದೇ, ಸುರಕ್ಷಿತವಾಗಿ ಓಡಾಡುವಂತಹ ವಾತಾವರಣ ಕಲ್ಪಿಸಿ.
ನಿಮ್ಮ ಸರ್ಕಾರದ ಅರಾಜಕತೆಯಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಬಲಪಡಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.