ಭೂತನೆರಿಗೆ ಹಬ್ಬದ ಪೂರ್ವಭಾವಿ ಸಭೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪಾರಂಪರಿಕ ಜಾನಪದ ಆಚರಣೆ ಭೂತನೆರಿಗೆ ಹಬ್ಬ ಇದೇ ತಿಂಗಳು
7 ಕ್ಕೆ  (ಸೋಮವಾರ) ಮಧ್ಯಾಹ್ನ 3 ಗಂಟೆಗೆ   ಶ್ರೀ ಲಕ್ಷ್ಮೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪೂಜಾರಿ ಆನಂದ್ ಸಮ್ಮುಖದಲ್ಲಿ ಸಮಿತಿ ಸಭೆ ನಡೆಸಿ ತೀರ್ಮಾನಿಸಲಾಯಿತು.

ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜು ಮಾತನಾಡಿ, ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಭೂತನೆರಿಗೆ ಹಬ್ಬಕ್ಕೆ ರಾಜ್ಯ, ಜಿಲ್ಲಾ, ತಾಲೂಕು ಹೋಬಳಿಗಳಿಂದ ಹೆಚ್ಚು ಜನ ಭಾಗವಹಿಸುವುದರಿಂದ ಯಾವುದೇ ಆಹಿತರ ಘಟನೆಗಳು ನಡೆಯದಂತೆ ಗ್ರಾಮಸ್ಥರು  ನೋಡಿಕೊಳ್ಳಬೇಕು, ಭೂತನೆರಿಗೆ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಚರ್ಚೆ ಮಾಡಿಕೊಳ್ಳಿ ಎಂದು ಹೇಳಿದರು.

- Advertisement - 

 ಭೂತನೆರಿಗೆ ಹಬ್ಬಕ್ಕೆ ವೇಷಧಾರಿಗಳಾಗಿ ಶೇಖರ್ (ಕೆಂಚಣ್ಣ), ಮಂಜುನಾಥ್ (ಕರಿಯಣ್ಣ) ವೇಷಧಾರಿಗಳಾಗಿ ಹಬ್ಬಕ್ಕೆ  ಮುಕ್ತಿ ಕೊಡಲಿದ್ದಾರೆ.

 ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮುನಿಕೃಷ್ಣಪ್ಪ, ಟಿ.ವಿ.ವೆಂಕಟೇಶ್, ಜೆಡಿಎಸ್ ಯುವ ಮುಖಂಡ ಉದಯ ಆರಾಧ್ಯ, ಕಾಂಗ್ರೆಸ್ ಮುಖಂಡ ಉಮೇಶ್ ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.

- Advertisement - 

 

Share This Article
error: Content is protected !!
";