ಸೆ.08 ಕ್ಕೆ ಪತ್ರಿಕಾ ವಿತರಕರ ಹಬ್ಬ

khushihost

ಶಿವಮೊಗ್ಗ : ಚಿತ್ರದುರ್ಗದಲ್ಲಿ ಸೆ.೮ರಂದು ಪತ್ರಿಕಾ ವಿತರಕರ 8ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಾಲತೇಶ್ ಎನ್.ತಿಳಿಸಿದರು.

ಅವರು ಮಾತನಾಡುತ್ತಾ ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ಅಂದು ಬೆಳಗ್ಗೆ ೧೧.೩೦ಕ್ಕೆ ನಡೆವ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಯ ನಾನಾ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಗೋವಿಂದ ಕಾರಜೋಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಗಣ್ಯರು ಭಾಗವಹಿಸುವರು ಎಂದು ಹೇಳಿದರು.

ಮಧ್ಯಾಹ್ನ ೨ಕ್ಕೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಓದುತ್ತಿರುವ ಪತ್ರಿಕಾ ವಿತರಕರು ಹಾಗೂ ವಿತರಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಮಧ್ಯಾಹ್ನ ೩ಕ್ಕೆ ’ವಿತರಕರು ಅಂದು ಇಂದು ಮುಂದು ವಿಷಯ ಕುರಿತು ಚರ್ಚಾ ಗೋಷ್ಠಿ ನಡೆಯಲಿದ್ದು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಉದ್ಘಾಟಿಸುವರು ಎಂದು ತಿಳಿಸಿದರು.

ಸರಕಾರ ಪತ್ರಿಕೆಗಳನ್ನು ನಾಲ್ಕನೇ ಅಂಗ ಎಂದು ಗುರುತಿಸಿದೆ, ಆದರೆ ಮನೆ ಮನೆಗೆ ಪತ್ರಿಕೆಗಳನ್ನು ವಿತರಣೆ ಮಾಡುವವರನ್ನು ನಿರ್ಲಕ್ಷಿಸಿದೆ. ನಮಗೆ ಯಾವುದೇ ರೀತಿಯ ಸೌಲಭ್ಯಗಳು ಲಭಿಸಿಲ್ಲ ಕೋವಿಡ್

ಸಮಯದಲ್ಲಿ ನಾನಾ ತೊಂದರೆ ಅನುಭವಿಸಿದ್ದು, ಹಲವು ವಿತರಕರನ್ನು ಕಳೆದು ಕೊಳ್ಳಬೇಕಾಯಿತು. ಈ ಸಮಯದಲ್ಲಿ ಒಕ್ಕೂಟ ಮಾಡುವುದರ ಮೂಲಕ ನಮ್ಮ ಸಮಸ್ಯೆಗಳಿಗಾಗಿ ಹೋರಾಟ ಮಾಡಲಾಗುತ್ತಿದೆ. ಈಗ ಸರ್ಕಾರದಿಂದ ನಮಗೆ ಸ್ಪಂದನೆ ಸಿಕ್ಕಿದೆ, ಸರಕಾರದ ಇ-ಶ್ರಮ್ ಯೋಜನೆಯಡಿ ನಮಗೆ ಅರ್ಜಿ ಹಾಕಲು ಅನುಮತಿ ಲಭಿಸಿರಿವುದು ಸಂತಸ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ನಮ್ಮ ಒಕ್ಕೂಟದ ಹೆಸರಿನಲ್ಲಿ ಕ್ಷೇಮ ನಿಧಿ ಸ್ಥಾಪಿಸಿ ೧೦ ಕೋಟಿ ಮೀಸಲಿಡುವುದು, ಪತ್ರಿಕಾ ವಿತರಕರಿಗೆ ರಾಜ್ಯೋತ್ಸವ ಪ್ರಶಸ್ತಿ ಮುಂದುವರೆಸಿಕೊಂಡು ಹೋಗುವುದು ಸೇರಿದಂತೆ ಮತ್ತಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಮನವಿ ಸಲ್ಲಿಸಲಾಗುವುದು. ರಾಜ್ಯದಲ್ಲಿ ಸುಮಾರು ೪೦ ಸಾವಿರ ಪತ್ರಿಕಾ ವಿತರಕರಿದ್ದೇವೆ, ನಮ್ಮ ಒಕ್ಕೂಟದಲ್ಲಿ ಸುಮಾರು ೩೫೦೦ ವಿತರಕರು ನೋಂದಾಯಿಸಿಕೊಂಡಿದ್ದಾರೆ. ಈ ಸಮ್ಮೇಳನದಲ್ಲಿ ರಾಜ್ಯದ ನಾನಾ ಕಡೆಗಳಿಂದ ಸುಮಾರು ೩ ಸಾವಿರಕ್ಕೂ ಹೆಚ್ಚು ವಿತರಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ೫೦೦ ಜನ ಪತ್ರಿಕಾ ವಿತರಕರು ಇದ್ದು, ಸೆ.೮ಕ್ಕೆ ಪತ್ರಿಕಾ ವಿತರಕರ ೪ನೇ ರಾಜ್ಯ ಸಮ್ಮೇಳನಕ್ಕೆ ಎಲ್ಲಾ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

- Advertisement -  - Advertisement - 
Share This Article
error: Content is protected !!
";