ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಹಗಲುವೇಷ ಕಲಾವಿದ ಶ್ರೀನಿವಾಸ್ ಗೆ ತಾಲೂಕು ಆಡಳಿತ ವತಿಯಿಂದ ಗೌರವಿಸಲಾಯಿತು.
ಮೊಳಕಾಲ್ಮೂರು ತಾಲೂಕು ಆಡಳಿತ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಹಗಲುವೇಷ ಕಲಾವಿದ ಚಿಕ್ಕುಂತಿ ಗ್ರಾಮದ ಎ. ಶ್ರೀನಿವಾಸ ರವರನ್ನು ಸನ್ಮಾನಿಸಿಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎನ್.ವೈ. ಗೋಪಾಲಕೃಷ್ಣ, ತಹಶೀಲ್ದಾರ್ ಜಗದೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೈಯದ್ ನಾಸಿರ್, ಆರಕ್ಷಕ ನಿರೀಕ್ಷಕ ವಸಂತ ಆಸೋದೆ, ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ರಂಗಪ್ಪ ಹಾಗೂ ದಲಿತ ಸಂಚಾಲಕ ಜಿ ಶ್ರೀನಿವಾಸ್ ಮೂರ್ತಿ, ರಂಗ ಸಂಘಟಕ ಡಿ ಓ ಮುರಾರ್ಜಿ, ಕಲಾವಿದ ವೇದಿಕೆ ಅಧ್ಯಕ್ಷ ಜಿಪಿ ಸುರೇಶ್ ಇತರರು ಇದ್ದರು.