ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ವ ಜನಾಂಗದ ಸಹಕಾರದಿಂದ ನನ್ನ ಕ್ಷೇತ್ರ ಅಭಿವೃದ್ಧಿ ಮಾಡಿದ್ದು ಮುಂದಿನ ದಿನದಲ್ಲಿ ಹೆಚ್ಚಿನ ಅವಕಾಶ ದೊರಕಿದರೆ ಮತ್ತಷ್ಟು ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಪ್ರವಾಸಿ ನಾಯಕ ಸಮಾಜದಿಂದ ಏರ್ಪಡಿಸಿದ್ದು ಹುಟ್ಟು ಹಬ್ಬ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಕೇಕ್ ಕಟ್ ಮಾಡಿ ಮಾತನಾಡಿದರು.
ನಾಯಕ ಸಮಾಜದಿಂದ ಹುಟ್ಟು ಹಬ್ಬ ಆಚರಣೆ ನನಗೆ ಸಾಕಷ್ಟು ಖುಷಿ ತಂದಿದೆ. ಜಿಲ್ಲಾ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದು ನಮ್ಮ ಸಮಾಜದ ಬಂಧುಗಳು ಮತ್ತು ಇತರೆ ಸಮಾಜದ ಬಂಧುಗಳು, ಅಧಿಕಾರಿ ವರ್ಗ ಆಗಮಿಸಿ ಅತ್ಯಂತ ಪ್ರೀತಿಯಿಂದ ಅಭಿನಂದನೆ ಸಲ್ಲಿಸಿದ್ದು ಅವರಿಗೆ ನಾನು ಚಿರ ಋಣಿಯಾಗಿರುತ್ತೇನೆ.
ಮುಂದಿನ ದಿನದಲ್ಲಿ ಪಕ್ಷ ಹೆಚ್ಚಿನ ಕೆಲಸ ಮಾಡಲು ಅವಕಾಶ ಕಲ್ಪಿಸಿದರೆ ಜಿಲ್ಲೆಯ ಅಭಿವೃದ್ಧಿ ನಾನು ಸಹ ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಪಕ್ಷ ನೀಡಿದ ಎಲ್ಲಾ ಜವಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಮೂರು ಬಾರಿ ಗೆಲುವು ಸಾಧಿಸುವ ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಲೀಡ್, ನಗರಸಭೆ ಅಧಿಕಾರ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ನಡೆಸಲು ಎಲ್ಲಾ ರೀತಿಯಿಂದಲೂ ಶಕ್ತಿ ನೀಡಿದ್ದು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಂತೆ ದುಡಿಯುತ್ತಿದ್ದೇನ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರಾದ ಎಟಿಎಸ್ ತಿಪ್ಪೇಸ್ವಾಮಿ, ಮಂಜುನಾಥ್, ಅಹೋಬಲ ಟಿವಿಎಸ್ ಅರುಣ್ ಕುಮಾರ್, ಕಾಟೀಹಳ್ಳಿ ಕರಿಯಪ್ಪ, ಸವಿತಾ ರಘು, ನಾಗರಾಜ್ ಜಾನ್ಹಾವಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಅಶೋಕ್ ಬೆಳಘಟ್ಟ, ಪ್ರಶಾಂತ್ ಮತ್ತು ಅಧಿಕಾರಿಗಳು, ರೈತ ಸಂಘ ಮುಖಂಡರು, ಸಂಘಟನೆಗಳ ಅಧ್ಯಕ್ಷರು ಆಗಮಿಸಿ ಶುಭ ಕೋರಿದರು.