ಬಾರ್ ನಲ್ಲಿ ಕೈ ತಾಗಿದ್ದಕ್ಕೆ ಯುವಕರ ಹೊಡೆದಾಟ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಬಾರ್ ನಲ್ಲಿ ಪರಸ್ಪರರ ಕೈ ತಾಗಿದ್ದಕ್ಕೆ ನಾಲ್ವರು ಯುವಕರು ಹೊಡೆದಾಡಿಕೊಂಡ ಘಟನೆ ವರದಿಯಾಗಿದೆ.

ಶಂಕರ ಮಠ ರಸ್ತೆಯಲ್ಲಿರುವ ಬಾರ್ ನಲ್ಲಿ ಶೇಷಾದ್ರಿಪುರಂ ಮೂವರು ಹುಡುಗರು ಕುಡಿಯುತ್ತಿದ್ದ ವೇಳೆ ಚಿಕ್ಕಲ್ ನ ಹುಡುಗರು ಬಂದಿದ್ದಾರೆ. ನಡೆದಾಡುವಾಗ ಕೈ ಆಕಸ್ಮಿಕವಾಗಿ ತಾಗಿದೆ. ಅಷ್ಟಕ್ಕೆ ಗಲಾಟೆಯಾಗಿದೆ. ಬಾರ್ ನಿಂದ ಹೊರ ಬಂದು ಗಲಾಟೆ ಮಾಡಿಕೊಂಡು ಹೊಡೆದಾಡಿದ್ದಾರೆ.

ಈ ವೇಳೆ ಪೊಲೀಸರಿಗೆ ಕರೆ ಮಾಡಿದ ಪರಿಣಾಮ ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಯುವಕರು ಪರಾರಿಯಾಗಿದ್ದಾರೆ. ಕಾರ್ತಿಕ್, ರವಿ, ಸಂಜು ದೇವಕರ್‌ ಪೊಲೀಸರು ವಶದಲ್ಲಿದ್ದಾರೆ.

ಚಂದನ್ ಮತ್ತು ದರ್ಶನ್ ಎಂಬುವರು ಪರಾರಿಯಾ ಗಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -  - Advertisement - 
Share This Article
error: Content is protected !!
";