ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಲಾಲ್‌ಬಾಗ್ ಮೂಲಕ ಟನಲ್(ಸುರಂಗ ರಸ್ತೆ) ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತಪಿಡಿಸಿ ನಟಿಯರು ಬೃಹತ್ ಪ್ರತಿಭಟನೆ ನಡೆಸಿದರು. ನಟಿಯರಾದ ಸುಧಾ ಬೆಳವಾಡಿ ಮತ್ತು ಸಂಯುಕ್ತಾ ಇವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಹಲವು ನಾಗರಿಕರು ಭಾಗವಹಿಸಿ ಈ ಯೋಜನೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಸರ್ಕಾರವು ಮರಗಳನ್ನು ಕಡಿಯುವುದಿಲ್ಲ ಎಂದು ಹೇಳಿದರೂ, 16.7 ಕಿಲೋಮೀಟರ್ ಸುರಂಗ ಮಾರ್ಗ ನಿರ್ಮಿಸುವಾಗ ಈ ಭರವಸೆಯನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಡ್ರೈನೇಜ್, ರಸ್ತೆ ಗುಂಡಿಗಳು ಸೇರಿದಂತೆ ಹಲವಾರು ಮೂಲ ಭೂತ ಸಮಸ್ಯೆಗಳಿವೆ. ಸರ್ಕಾರ ಇವುಗಳನ್ನು ಬಗೆಹರಿಸುವ ಬದಲು ಇಂತಹ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ.
ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ಪೀಳಿಗೆಗೆ ಹಸಿರನ್ನು ಉಳಿಸುವುದು ನಮ್ಮ ಜವಾಬ್ದಾರಿ ಎಂದು ನಟಿಯರಾದ ಸುಧಾ ಮತ್ತು ಸಂಯುಕ್ತಾ ಇಬ್ಬರೂ ಆಕ್ರೋಶ ಹೊರಹಾಕಿ ಸರ್ಕಾರ ಈ ಕೂಡಲೇ ಸುರಂಗ ರಸ್ತೆ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿದರು.

