ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರನಟಿ ರನ್ಯಾರಾವ್ ಕಂಪನಿಗೆ ಕೆಐಎಡಿಬಿ ಜಮೀನು ನೋಂದಣಿ ಆಗಿಲ್ಲ ಎಂದು ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಡಾ.ಟಿ. ಬಿ ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಶಿರಾದಲ್ಲಿರುವ ಕೆಐಎಡಿಬಿ ವತಿಯಿಂದ ಚಿತ್ರ ನಟಿ ರನ್ಯಾರಾವ್ ಅವರು ನಿರ್ದೇಶಕಿ ಆಗಿರುವ ಕ್ವಿರೋಡ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 2023ರಲ್ಲಿ 12 ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು.
ಆದರೆ, ಕೆಐಎಡಿಬಿ ಜಮೀನಿನ ಖರೀದಿಗೆ ರನ್ಯಾ ರಾವ್ ಅವರು ಹಣ ಪಾವತಿ ಮಾಡಿರಲಿಲ್ಲ. ಹೀಗಾಗಿ ಅವರ ಕಂಪನಿಗೆ ಕೆಐಎಡಿಬಿ ಜಮೀನನ್ನು ನೀಡಿಲ್ಲ ಎಂದು ಜಯಚಂದ್ರ ಅವರು ಹೇಳಿದರು.
ಸ್ಥಳೀಯರಿಗೆ ಕೆಐಎಡಿಬಿ ಜಮೀನು ನೀಡಬೇಕು ಎಂದು ನಿರ್ಧಾರ ಕೈಗೊಂಡಿರುವುದರಿಂದ ರನ್ಯಾ ರಾವ್ ಗೆ ಮಂಜೂರಾಗಿದ್ದ ಜಮೀನನ್ನು ರದ್ದುಪಡಿಸಲಾಗಿದೆ ಎಂದು ಜಯಚಂದ್ರ ಅವರು ತಿಳಿಸಿದರು.

