ಚಂದ್ರವಳ್ಳಿ ನ್ಯೂಸ್, ಕೊರಟಗೆರೆ:
ಕೊರಟಗೆರೆ ತಾಲ್ಲೂಕು ಎಲೆ ರಾಂಪುರ ಕುಂಚಿಟಿಗರ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿಗಳು ಕೇಂದ್ರ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರು, ದಾನಿಗಳೂ ಆದ ಜಿ.ಎಲ್ ನರೇಂದ್ರಬಾಬು ರವರಿಂದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ಕೊಡಿಸಲಾಯಿತು.
ಹುಬ್ಬಳ್ಳಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಶಿರಾ ತಾಲೂಕಿನ ಕಸಬಾ ಹೋಬಳಿಯ ಹರಿ ಅಜ್ಜಿಹಳ್ಳಿ ಗ್ರಾಮದ ಯಂಜಾರಪ್ಪ ನವರ ಪುತ್ರಿ ಯಮುನಾ ವೈ ಎಂಬ ವಿದ್ಯಾರ್ಥಿನಿಗೆ ಮತ್ತು ಹಾಸನ ವೈದ್ಯಕೀಯ
ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಶಿರಾ ತಾಲೂಕು ಹುಲಿಕುಂಟೆ ಹೋಬಳಿ ಗೋಣಿ ಹಳ್ಳಿ ಗ್ರಾಮದ, ತುಮಕೂರು ಕುಂಚಿಟಿಗರ ಸಂಘದ ನಿರ್ದೇಶಕರಾದ ವೀರ ನಾಗಪ್ಪನವರ ಸಹೋದರ ನಾಗರಾಜು ಎಂಬುವರ ಮಗ ಜಿಎನ್ ವಿಕಾಸ್ ಎಂಬುವರಿಗೆ ತಲಾ 50,000 ರೂಗಳಂತೆ ದಾನ ಕೊಡಿಸಿರುತ್ತಾರೆ.
ಈ ಸಂದರ್ಭದಲ್ಲಿ ದಾನಿಗಳಾದ ಜಿ.ಎಲ್ ನರೇಂದ್ರಬಾಬು, ನೇತಾಜಿ ಶ್ರೀಧರ್, ವಕೀಲರಾದ ಶಿವರಾಮ, ನಾಗಣ್ಣ, ಶ್ರೀನಾಥ್, ಎಸ್ ಕೆ ನಾಗರಾಜು, ಮೆಡಿಕಲ್ ಹರ್ಷ, ತಿಮ್ಮೇಗೌಡ, ಮಂಜುನಾಥ್, ಈರಣ್ಣ, ಯಂಜಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

