ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಮರ ಜ್ಯೋತಿ ಯೋಜನೆ ಅಡಿಯಲ್ಲಿ ಹಿರಿಯೂರಿನ ದಿವಂಗತ ಎಸ್.ಬಾಲಾಜಿ ರವರ ಮಗ ಸುಮುಖ್ ಗೆ ಮೂರು ಲಕ್ಷದ ಎಂಬತ್ತು ಸಾವಿರ (3,80,000) ರೂಗಳನ್ನು ವಿತರಿಸಲಾಯಿತು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ವಿದ್ಯಾ ಸಂಸ್ಥೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾಗಿರುವ ಕೆ.ವಿ. ಅಮರೇಶ್, ಹಿರಿಯೂರು ಆರ್ಯವೈಶ್ಯ ಮಂಡಳಿ ಅಧ್ಯಕ್ಷ H.S. ನಾಗರಾಜು ಗುಪ್ತ , ಕಾರ್ಯದಶಿ೯ ಪಿ.ವಿ ನಾಗರಾಜ್ , ಮಾಜಿ ಅಧ್ಯಕ್ಷರು ಆನಂದ ಶೆಟ್ಟರು
ಹಾಗೂ ಆರ್ಯವೈಶ್ಯ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು ಈ ಒಂದು ಮಹತ್ತರ ಯೋಜನೆಯಿಂದ ಅಕಾಲಿಕವಾಗಿ ಮರಣ ಹೊಂದಿದವರ ಕುಟುಂಬಕ್ಕೆ ಆಸರೆಯಾದ ಅಮರ ಜ್ಯೊತಿ ಯೋಜನೆ ಈ ಯೋಜನೆಯ ಸದುಪಯೋಗವನ್ನು ಕುಲ ಭಾಂದವರು ಪಡೆಯಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.