ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಾರ್ಡ್ ನಂ 21 ರ ಟಿಎಸ್ ಟಿ ಕಾಂಪ್ಲೆಕ್ಸ್ ಪಕ್ಕದಲ್ಲಿರುವ ಅಸಲಿನ್ ಪ್ರಾವಿಷನ್ ಸ್ಟೋರ್ ಮಾಲೀಕ ಮೊಹಮ್ಮದ್ ಸಲ್ಮಾನ್ ರವರು ರಾಶಿ ರಾಶಿ ಅಂಗಡಿ ಕಸವನ್ನು ರಸ್ತೆಗೆ ಸುರಿದಿದ್ದು ಬೆಳ್ಳಂಬೆಳಿಗ್ಗೆ ಅದನ್ನು ಗಮನಿಸಿದ ನಗರಸಭೆ ಪೌರಾಯುಕ್ತರು ಮತ್ತು ಆರೋಗ್ಯ ನೀರಿಕ್ಷಕರು ಜಂಟಿಯಾಗಿ ಪೌರ ಕಾರ್ಮಿಕರ ಜೊತೆಗೂಡಿ ರಸ್ತೆಗೆ ಚಲ್ಲಿದ್ದ ಕಸವನ್ನು ತೆಗೆದು ಅವರ ಅಂಗಡಿ ಮುಂದೆಯೇ ಸುರಿದು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಯಿತು.
ಪದೇಪದೇ ಈ ರೀತಿ ಮಾಡುತ್ತಿರುವುದರಿಂದ ಈಗಾಗಲೇ ಸಾಕಷ್ಟು ಎಚ್ಚರಿಕೆ ನೀಡಿದ್ದರೂ ಗಮನ ನೀಡಿದ ಮಾಲೀಕರಿಗೆ ಎರಡು ಸಾವಿರ ರೂ. ದಂಡ ಹಾಕಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತ ಎ.ವಾಸೀಂ ಎಚ್ಚರಿಕೆ ನೀಡಿದರು,
ಆರೋಗ್ಯ ನೀರಿಕ್ಷಕಿ ಸಂಧ್ಯಾ ಸೇರಿದಂತೆ ನಗರಸಭೆ ಸಿಬ್ಬಂದಿಗಳು, ಅಧಿಕಾರಿಗಳು ಹಾಜರಿದ್ದರು.

