ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮೈಸೂರಿನ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರ ವಿರುದ್ಧ FIR ದಾಖಲಾಗಿರುವ ಕ್ರಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುವ ಧೋರಣೆಯ ದ್ಯೋತಕವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.
ವಿರೋಧ ಪಕ್ಷದ ನಾಯಕರನ್ನು ಅದರಲ್ಲೂ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕರ್ನಾಟಕ ಕಾಂಗ್ರೆಸ್ ಸರ್ಕಾರ ಪೊಲೀಸ್ ಅಸ್ತ್ರ ಬಳಸಿ ಬೆದರಿಕೆಯ ಮಾರ್ಗವನ್ನು ಅನುಸರಿಸುತ್ತಿದೆ. FIR ದಾಖಲಿಸಿ ಬಂಧನದ ಭೀತಿ ಸೃಷ್ಟಿಸುವುದು ಕಾಂಗ್ರೆಸ್ ಸರ್ಕಾರದ ದಮನಕಾರಿ ನೀತಿಯಾಗಿದೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕತ್ತುಹಿಸುಕುವ ಕಾಂಗ್ರೆಸ್ ಸಂಸ್ಕೃತಿಯ ಮುಂದುವರಿದ ಭಾಗವಷ್ಟೆ ಎಂದು ಅಶೋಕ್ ಟೀಕಿಸಿದ್ದಾರೆ.
ಮತೀಯ ಶಕ್ತಿಗಳು, ಸಮಾಜಘಾತಕ ಕಿಡಿಗೇಡಿಗಳು ಗಂಭೀರ ಅಪರಾಧದಲ್ಲಿ ತೊಡಗಿಕೊಂಡರೂ ಅವರನ್ನು ಬಂಧಿಸುವ, FIR ದಾಖಲಿಸುವ ಕ್ರಮಕ್ಕೆ ಮುಂದಾಗದ ಪೊಲೀಸರು ಬಿಜೆಪಿ ಮುಖಂಡರ ಮೇಲೆ ದೂರು ಬಂದ ತಕ್ಷಣವೇ FIR ದಾಖಲಿಸುವ ಮೂಲಕ ವಿರೋಧ ಪಕ್ಷದವರ ಬಾಯಿ ಮುಚ್ಚಿಸಬಹುದು ಎಂದು ಅಂದುಕೊಂಡಂತಿದೆ. ಕರ್ನಾಟಕ ಬಿಜೆಪಿ ಇಂತಹ ನಡೆಯನ್ನು ಅತ್ಯುಗ್ರವಾಗಿ ಖಂಡಿಸುತ್ತದೆ.
ಪೊಲೀಸರ ವಿವೇಚನಾ ರಹಿತ ಕ್ರಮ ಹಾಗೂ ವರ್ತನೆಗೆ ಬಿಜೆಪಿ ಕಾರ್ಯಕರ್ತರು ಜಗ್ಗುವ, ಕುಗ್ಗುವ ಪ್ರಶ್ನೆಯೇ ಇಲ್ಲ, ಇದನ್ನು ಸಮರ್ಥವಾಗಿ ಎದುರಿಸಿ ನಿಲ್ಲುತ್ತೇವೆ ಎಂದು ಅಶೋಕ್ ಸವಾಲ್ ಹಾಕಿದ್ದಾರೆ.

