ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶದ ಉದ್ಯಮಿಗಳಿಗೆ ಬಹು ಕೋಟಿ ರೂ.ಗಳನ್ನು ವಂಚಿಸಿರುವ ಪ್ರಕರಣದ ಆರೋಪಿ ಮಂಗಳೂರು ಮೂಲದ ರೋಷನ್ ಸಲ್ದಾನ್ ವಿರುದ್ಧ ಚಿತ್ರದುರ್ಗದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಆಂದ್ರ ಮೂಲದ ಉದ್ಯಮಿ ದೂರು ನೀಡಿದ್ದು ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸಾಲ ಕೊಡುವ ಆಮೀಷವೊಡ್ಡಿ 40 ಲಕ್ಷ ಹಣ ಪಡೆದು ಆರೋಪಿ ವಂಚನೆ ಮಾಡಿದ್ದನು ಎಂದು ದೂರಲಾಗಿದೆ.
ಆಂದ್ರ ಪ್ರದೇಶದ ಹಿಂದೂಪುರ ಮೂಲದ ಉದ್ಯಮಿ ಕೃಷ್ಣಮೂರ್ತಿ ಅವರು ಸಿಲ್ಕ್ ಸ್ಯಾರಿ ಕಂಪನಿ ಉದ್ಯಮಿಯಾಗಿದ್ದು ಇವರಿಗೆ ರೋಷನ್ ಎನ್ನುವ ವ್ಯಕ್ತಿ ವಂಚಿಸಿದ್ದನು. ಸಾಯಿ ಪೈನಾನ್ಸ್ ನಲ್ಲಿ ಸಾಲ ನೀಡುವ ಆಸೆ ತೋರಿಸಿ ವಂಚನೆ ಮಾಡಿದ್ದಾನೆ.
9 ಸ್ಟ್ಯಾಂಪ್ ಪೇಪರ್ ಗಳಿಗೆ 40 ಲಕ್ಷ ವಸೂಲಿ ಮಾಡಿದ್ದ ಆರೋಪವನ್ನು ಎದುರಿಸುತ್ತಿದ್ದಾನೆ.
ಸಾಯಿ ಪೈನಾನ್ಸ್ ವ್ಯವಸ್ಥಾಪಕ ನಿರ್ದೇಶಕ ರೋಷನ್ ಸಲ್ದಾನ್ ಹಾಗೂ ಪರಿಚಿತ ವಿಮಲೇಶ್ ಹತ್ತಿಕೊಂಡ ವಿರುದ್ದ ಕೇಸ್ ದಾಖಲಾಗಿದೆ. 10 ಚೆಕ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಐಡಿ ಕಾರ್ಡ್, ಪ್ಯಾಕ್ಟರಿ ಕರಾರು ಪತ್ರ ಪಡೆದು ಆರೋಪಿ ವಂಚನೆ ಮಾಡಿದ್ದಾನೆ.
2023 ರಲ್ಲಿ ವಂಚಿಸಿದ್ದ ಗ್ಯಾಂಗ್ ವಿರುದ್ದ ಸೆಕ್ಷನ್ 420, 406, 34 ಅಡಿಯಲ್ಲಿ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.