ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಂಚ ಸಿಎಂ, ಪಂಚರ್‌ಕಾಂಗ್ರೆಸ್!, ನವೆಂಬರ್‌ಕ್ರಾಂತಿಗೆ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಸಂಘರ್ಷ ಶುರುವಾಗಿದ್ದು, ಸಿಎಂ ಕುರ್ಚಿಗೆ ಕಿತ್ತಾಟ, ಕೂಗಾಟ ಜೋರಾಗಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ನಾನೇ 5 ವರ್ಷ ಸಿಎಂ ಎಂದು ಸ್ವತಃ ಸಿದ್ದರಾಮಯ್ಯ ಜಪಿಸುತ್ತಿದ್ದಾರೆ. ಈ ಸಮಯದಲ್ಲೇ ನಾನೂ ಸಿಎಂ ಎಂದು ನಿಮಿಷಕ್ಕೊಬ್ಬ, ದಿನಕ್ಕೊಬ್ಬ ನಾಯಕರು ಹೇಳಿಕೆ ಕೊಡುತ್ತಿದ್ದಾರೆ.
ದಲಿತ ಸಿಎಂ ಚರ್ಚೆಯೂ ಮುನ್ನೆಲೆಗೆ ಬಂದಿದ್ದು, ಗೌಪ್ಯವಾಗಿ ಸಭೆಗಳ ಮೂಲಕ ಹಿರಿಯ ನಾಯಕ ಮಲ್ಲಿಕಾರ್ಜನ ಖರ್ಗೆ, ಸಚಿವರಾದ ಸತೀಶ್‌ಜಾರಕಿಹೊಳಿ, ಜಿ. ಪರಮೇಶ್ವರ್, ಕೆ ಹೆಚ್‌ಮುನಿಯಪ್ಪ ಅವರು ದಲಿತ ಸಿಎಂ ದಾಳ ಉರುಳಿಸಿದ್ದಾರೆ.
ಇದಕ್ಕೆಲ್ಲ ಸೆಡ್ಡು ಹೊಡೆದಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಶಾಸಕರ ಬೆಂಬಲ ಇಲ್ಲದಿರುವುದನ್ನು ಅರಿತು, ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ರಾಜ್ಯದ ಅಭಿವೃದ್ಧಿ ಯೋಜನೆಗಳು, ಅನುದಾನ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸದ ಕಾಂಗ್ರೆಸ್‌ನಾಯಕರು, ಸಿಎಂ ಕುರ್ಚಿಗಾಗಿ ಮಾತ್ರ ದೆಹಲಿಯಲ್ಲಿ ಜನಪಥ್10 ನಿವಾಸಕ್ಕೆ ಪರೇಡ್ ನಡೆಸುತ್ತಿರುವುದು ರಾಜ್ಯದ ದುರಂತ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

