ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ನಗರದ ಹೃದಯ ಭಾಗದಲ್ಲಿ 30 40 ವರ್ಷಗಳ ಇಂದಿನಿಂದಲೂ ನಗರದ ಒಳಭಾಗದಲ್ಲಿ ನಡೆಯುತ್ತಿದ್ದು ಹೂವಿನ ಹರಾಜು ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸದಂತೆ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ ಹೊರೆಕೇರಪ್ಪ ಮಾತನಾಡಿ ಗ್ರಾಮೀಣ ಭಾಗದ ಸಣ್ಣ ಅತಿ ಸಣ್ಣ ಹಾಗೂ ಹಿಂದುಳಿದ ದಲಿತರು ರೈತರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೂವಿನ ಕೃಷಿಯಲ್ಲಿ ತೊಡಗಿಕೊಂಡಿದ್ದು ಬಸ್ಸು ಆಟೋ ದ್ವಿಚಕ್ರ ವಾಹನಗಳ ಮುಖಾಂತರ ಮಾರುಕಟ್ಟೆಗೆ ಬಂದು ಸಲ್ಪ ಸಲ್ಪ ಪ್ರಮಾಣದ ಹೂಗಳನ್ನು ಸಹ ಮಾರಾಟ ಮಾಡಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಂಡು ಹೋಗುವುದಕ್ಕೆ ರೈತರಿಗೆ ಅನುಕೂಲವಾಗುತ್ತದೆ.
ನಗರದ ಹೊರಭಾಗದಲ್ಲಿರುವ ಕೃಷಿ ಮಾರುಕಟ್ಟೆಗೆ ಹೋಗಬೇಕೆಂದರೆ ಆಟೋ ಚಾರ್ಜ್ 100ರೂ ಬೇಕಾಗುತ್ತದೆ ನಗರದಲ್ಲೇ ಮಾರುಕಟ್ಟೆ ಇರುವುದರಿಂದ ರೈತರಿಗೆ ತಂದ ಹೂವನ್ನು ಮಾರಾಟ ಮಾಡಿ ಮನೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಊರಿಗೆ ತೆರಳುತ್ತಾರೆ.
ನಗರದಲ್ಲಿ ಹೂವು ಮಾರುಕಟ್ಟೆ ಇದ್ದರೆ ಕಾರ್ಯಕ್ರಮಗಳು ಇರುವರು ಹೂಗಳನ್ನು ಖರೀದಿ ಮಾಡುತ್ತಾರೆ. ನಗರದಿಂದ 2 km ದೂರ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಹೋಗುವುದಕ್ಕೆ ರೈತರಿಗೆ ತುಂಬಾ ಕಷ್ಟ ಆಗುತ್ತದೆ. ಯಾವುದೇ ಕಾರಣಕ್ಕೂ ಹೂವು ಮಾರುಕಟ್ಟೆಯನ್ನು ಸ್ಥಳಾಂತರ ಮಾಡಬಾರದೆಂದು ರೈತ ಸಂಘದ ವತಿಯಿಂದ ಮನವಿ ಮಾಡುತ್ತೇವೆ ಸ್ಥಳಾಂತರ ಮಾಡಿದ್ದಲ್ಲಿ ರೈತ ಸಂಘಟನೆಯಿಂದ ಉಗ್ರ ಹೋರಾಟ ಮಾಡಬೇಕೆಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ ಸಿ ಹೊರೆಕೇರಪ್ಪ ತಾಲೂಕು ಅಧ್ಯಕ್ಷರು ಬಿ ಓ ಶಿವಕುಮಾರ್ ತಾಲೂಕು ಯುವ ಘಟಕದ ಅಧ್ಯಕ್ಷರು ಯಳನಾಡು ಆರ್ ಚೇತನ್ ಜಿಲ್ಲಾ ಉಪಾಧ್ಯಕ್ಷ ಎಂ ಲಕ್ಷ್ಮಿಕಾಂತ್, ಆರ್.ರವೀಶ್, ಬಿ.ಡಿ ಶ್ರೀನಿವಾಸ್, ನಾಗರಾಜ್, ಹುಸೇನ್ ಸಾಬ್, ರಂಗಸ್ವಾಮಿ, ಶೇಖರ್, ಮಂಜುನಾಥ್, ಪಿ ನಾಗರಾಜ್, ರೇವಣಸಿದ್ದಪ್ಪ, ಪಾರ್ವತಮ್ಮ, ತಿಪ್ಪೇಸ್ವಾಮಿ ಭಾಗ್ಯಮ್ಮ ರೈತರು ಇದ್ದರು.

