ಎಫ್‍ಎಂಜಿಸಿ ಇಂಡಿಯಾ ಗಿನಿಸ್ ವಿಶ್ವದಾಖಲೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶದ ಪ್ರಮುಖ ಬ್ಯಾಂಕೇತರ ಹಣಕಾಸು ಸೇವೆಗಳ ಕಂಪನಿಯಾದ “ಎಫ್‍ಎಂಜಿಸಿ ಇಂಡಿಯಾ ಕ್ರೆಡಿಟ್”
, ಭಾರತದ ವಿವಿಧೆಡೆ 6 ಸ್ಥಳಗಳಲ್ಲಿ 517 ಪ್ರತಿನಿಧಿಗಳು ಭಾಗವಹಿಸಿದ್ದ “ಬೃಹತ್ ಜಾನುವಾರು ಕಲ್ಯಾಣ ಆರೈಕೆ ಜಾಗೃತಿ ಶಿಕ್ಷಣ ಕಾರ್ಯಕ್ರಮ ನಡೆಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಸ್ಥಾಪಿಸಿದೆ.

ಕಂಪನಿಯು 7ನೇ ಆವೃತ್ತಿಯ ಪಶು ವಿಕಾಸ ದಿನ(ಪಿವಿಡಿ)ದ ಅಂಗವಾಗಿ ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಒಂದು ದಿನದ ಜಾನುವಾರು ಆರೈಕೆ ಶಿಬಿರ ಆಯೋಜಿಸುವ ಮೂಲಕ ಈ ಮೈಲುಗಲ್ಲು ಸಾಧಿಸಿದೆ.

16 ರಾಜ್ಯಗಳ 500 ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಶಿಬಿರ ಆಯೋಜಿಸಲಾಗಿದ್ದು, ಸುಮಾರು 1.90 ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಎಂಡಿ ಶಂತನು ಮಿತ್ರ ಪ್ರಕಟಣೆಯಲ್ಲಿ ಹೇಳಿದ್ದಾರೆ.

ದೇಶದ ಶೇಕಡ 70ರಷ್ಟು ಮಂದಿ ಕೃಷಿಕರಾಗಿರುವುದರಿಂದ ಕಂಪನಿಯು 7ನೇ ಆವೃತ್ತಿಯ ಪಶು ವಿಕಾಸ ದಿನವನ್ನು “ಮೇರಾ ಪಶು ಮೇರಾ ಪರಿವಾರ್” ಎಂಬ ಶೀರ್ಷಿಕೆಯಡಿ ಆಚರಿಸಿತು. 6,000ಕ್ಕಿಂತ ಹೆಚ್ಚಿನ ಉದ್ಯೋಗಿಗಳು ಸಕ್ರಿಯವಾಗಿ  ಭಾಗವಹಿಸಿದ್ದರು.

“ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಬೃಹತ್ ಜಾನುವಾರು ಆರೈಕೆ ಜಾಗೃತಿ ಶಿಕ್ಷಣ ಕಾರ್ಯಕ್ರಮ ನಡೆಸಿ, ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಲಾಗಿದ್ದು, ಇದು ಉದ್ಯೋಗಿಗಳ ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಸಾಧ್ಯವಾಗಿದೆ. ಈ ವರ್ಷದ ಪಶು ವಿಕಾಸ ದಿನವು ಜಾನುವಾರು ಆರೈಕೆಯಲ್ಲಿ ನಮ್ಮೆಲ್ಲ ನಿರೀಕ್ಷೆಗಳನ್ನು ಮೀರಿದೆ ಎಂದು ಬಣ್ಣಿಸಿದ್ದಾರೆ.

ವಿಶ್ವ ದಾಖಲೆಗಳನ್ನು ಸಾಧಿಸುವ ತನ್ನ ಶ್ರೀಮಂತ ಪರಂಪರೆ ನಿರ್ಮಿಸುವ ಪಶು ವಿಕಾಸ ದಿನವನ್ನು ಈ ಹಿಂದೆ ಒಂದೇ ದಿನದಲ್ಲಿ ಅತಿದೊಡ್ಡ ಜಾನುವಾರು ಆರೈಕೆ ಶಿಬಿರಗಳನ್ನು ಆಯೋಜಿಸಿದ್ದಕ್ಕಾಗಿ ವರ್ಲ್ಡ್ ರೆಕಾರ್ಡ್ಸ್ ಯೂನಿಯನ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಬೆಸ್ಟ್ ಆಫ್ ಇಂಡಿಯಾ ರೆಕಾರ್ಡ್ಸ್ ಮತ್ತು ವರ್ಲ್ಡ್ ಬುಕ್ಸ್ ಆಫ್ ರೆಕಾರ್ಡ್ಸ್ ನಮ್ಮ ಕಂಪನಿಯ ಸಾಧನೆಯನ್ನು ಗುರುತಿಸಿವೆ ಎಂದು ವಿವರಿಸಿದ್ದಾರೆ.

 

Share This Article
error: Content is protected !!
";