ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
2023ನೇ ಸಾಲಿನ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿಗೆ ತಾಲ್ಲೂಕಿನ ನಾಗಸಂದ್ರ ಗ್ರಾಮದ ಸೋಬಾನೆ ಹಾಡುಗಳ ಕಲಾವಿದೆ ಓಬಮ್ಮ ಅವರು ಆಯ್ಕೆಯಾಗಿದ್ದಾರೆ.
ಮದುವೆ ನಾಮಕರಣ ಹಣ್ಣು ಮಕ್ಕಳು ಋತುಮತಿಯ ಸಂದರ್ಭಗಳಲ್ಲಿ ಹಳ್ಳಿ ಸೊಗಡಿನ ಸೋಬಾನೆ ಪದ ಜಾನಪದ ಹಾಡುವುದು ಹಿಂದಿನ ಸಾಂಪ್ರಾದಾಯಿಕ ಆಗಿತ್ತು ಅದರೆ ದಿನೆ ದಿನೆ ಕಣ್ಮರೆಯಾಗಿ ಸೋಬಾನೆ ಪದ ಜಾನಪದ ಎಂಬುದು ಮರೀಚಿಕೆಯಾಗಿದೆ ಇಂತಹ ಹಳ್ಳಿ ಸೊಗಡಿನ ಕಲೆಗಳು ಉಳಿಸಿ ಬೆಳೆಸುವುದು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. 2023 ರ ಸಾಲಿನಲ್ಲಿ 30 ಜಿಲ್ಲೆಗಳಿಂದ 30 ಜಾನಪದ ಕಲಾವಿದರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ಇಬ್ಬರು ಕಲಾವಿದರನ್ನು ಜಾನಪದ ತಜ್ಞ ಪ್ರಶಸ್ತಿಗೆ ಮತ್ತು ಜಾನಪದ ಪುಸ್ತಕ ತಜ್ಞ ಪ್ರಶಸ್ತಿಗೆ ಐವರು ಗಣ್ಯರನ್ನು ಆಯ್ಕೆ ಮಾಡಲಾಗಿದೆ.
ದಿನಾಂಕ 24.06.2024 ರಂದು ಬೆಂಗಳೂರಿನಲ್ಲಿ ನಡೆದ ಸರ್ವ ಸದಸ್ಯರ ತೀರ್ಮಾನದಂತೆ ಜಾನಪದ ಕಲಾವಿದೆ ಪ್ರಶಸ್ತಿಗೆ ತಾಲ್ಲೂಕಿನ ನಾಗಸಂದ್ರ ಗ್ರಾಮದ ಓಬಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ಸೋಬಾನೆ ಪದಗಳನ್ನು ಕುಟುಂಬದಲ್ಲಿನ ಹಿರಿಯರಿಂದ ಕಲಿತಿರುವ 67 ವರ್ಷದ ಓಬಮ್ಮ ಅವರು ಹಲವಾರು ವೇದಿಕೆಗಳಲ್ಲಿ ಸೋಬಾನೆ ಪದಗಳನ್ನು ಹಾಡಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆಯುವ ಜಾನಪದ ಉತ್ಸವ, ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ಷೇತ್ರದಲ್ಲಿನ ಉತ್ಸವ ಹಾಗೂ ಬೆಂಗಳೂರು ಆಕಾಶವಾಣಿ ಕೇಂದ್ರದ ವತಿಯಿಂದ ನಡೆದ ಶಿಬಿರಗಳಲ್ಲಿ ಭಾಗವಹಿಸಿ ಸೋಬಾನೆ ಪದಗಳನ್ನು ಹಾಡಿದ್ದಾರೆ.
ತಾಲ್ಲೂಕು ಕಲಾವಿದರ ಸಂಘದಲ್ಲಿ ಸಕ್ರಿಯವಾಗಿರುವ ಓಬಮ್ಮ ಅವರು ಶುಭ ಸಮಾರಂಭಗಳಿಂದ ಹಿಡಿದು ಸಾವಿನ ಮನೆಯಲ್ಲಿನ ದುಖಃವನ್ನು ಮರೆಸುವವರೆಗೆ ಎಲ್ಲಾ ರೀತಿಯ ಜಾನಪದ ಗೀತೆಗಳನ್ನು ಹಾಡುವ ಅವರ ಹಾಡು ಗಾರಿಕೆಯನ್ನು ಗುರುತಿಸಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ, ದೊಡ್ಡಳ್ಳಾಪುರದ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರ ಸಾಂಸ್ಕೃತಿ ಸಮಿತಿ ವತಿಯಿಂದ ಗೌರವಿಸಲಾಗಿದೆ.