ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಾಮೀಣರ ಮೂಲ ಸಾಂಸ್ಕೃತಿಕ ಬೇರುಗಳಾದ ಜಾನಪದ ಗೀತೆಗಳನ್ನು ಮರೆಯಬಾರದೆಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಡಿ.ನವಕೋಟಿ ಮನವಿ ಮಾಡಿದರು.
ಮಾನ್ವಿತ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಜಾನಪದ ಹಾಗೂ ಸಾಂಸ್ಕೃತಿಕ ಗೀತ ಗಾಯನ ಉದ್ಘಾಟಿಸಿ ಮಾತನಾಡಿದರು.
ಮಣ್ಣಿನ ಸೊಗಡಿನ ಜಾನಪದ ಹಾಡುಗಳು ಗ್ರಾಮೀಣ ಭಾಗದ ಸಂಸ್ಕೃತಿಯ ಪ್ರತಿಬಿಂಬ. ಹಾಗಾಗಿ ಜನಪದ ಹಾಡುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಹೇಳಿದರು. ಡಿ.ಎಸ್.ಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನನ್ನಿವಾಳ ಹನುಮಂತಪ್ಪ, ಗುತ್ತಿಗೆದಾರ ಜಿ.ಸಿ.ಗುಜ್ಜಾರಪ್ಪ, ನಿವೃತ್ತ ಪಶುವೈದ್ಯಾಧಿಕಾರಿ ಆರ್.ಮೂರ್ತಪ್ಪ, ಕಲಾವಿದ ಮಾರುತೇಶ್, ಮಾನ್ವಿಕ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷೆ ಕೆಂಚಮ್ಮ, ಕಲಾವಿದ ಎಸ್.ಚನ್ನಬಸಪ್ಪ ಇವರುಗಳು ವೇದಿಕೆಯಲ್ಲಿದ್ದರು.

