ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಬ್ರಹ್ಮ ರಥೋತ್ಸವದ ಪ್ರಯುಕ್ತ ಪರಂಪರೆ (ನೋ) ಸಂಸ್ಕೃತಿ ಹಾಗು ಸಾಮಾಜಿಕ ಸಂಸ್ಥೆ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರಗಳ ಸಹ ಯೋಗದೊಂದಿಗೆ ಜಾನಪದ ಸಂಗೀತ 2025 ರಸಮಂಜರಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜನಪದ ಗೀತೆ ತತ್ವಪದ ರಂಗಗೀತೆ ಗಾಯನ ಸುಗಮ ಸಂಗೀತ ಭಜನೆ ಮಾಡುವ ಮೂಲಕ ನಮ್ಮ ಸಂಸ್ಕೃತಿಯ ಹಬ್ಬಗಳು ಭಾಷೆ ವಾಸ್ತು ಶಿಲ್ಪ ಮತ್ತು ಸಾಹಿತ್ಯದ ಮೂಲಕ ನೋವಿನ ಸಂದರ್ಭದಲ್ಲಿ ಹಾಗು ಹಬ್ಬ ಹರಿದಿನಗಳಲ್ಲಿ ನಮ್ಮೆಲ್ಲರಲ್ಲೂ ಸಹನೆ ಸನ್ನಡತೆ ಮತ್ತು ಸಹಬಾಳ್ವೆ ಮನೋಭಾವವನ್ನು ಬೆಳೆಸುತ್ತದೆ.ಎಂದು ಪರಂಪರೆ (ನೋಂ) ಸಂಸ್ಕೃತಿ ಹಾಗು ಸಾಮಾಜಿಕ ಸಂಸ್ಥೆ ಅಧ್ಯಕ್ಷ ಚಿಕ್ಕ ಹನುಮಂತರಾಯಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಮೇಲಿನ ಜೂಗಾನಹಳ್ಳಿ ಗ್ರಾಮಪಂಚಾಯಿತಿ( ಎಸ್ ಎಸ್ ಘಾಟಿ) ಅಧ್ಯಕ್ಷೇ ಶ್ರೀಮತಿ ಉಮಾ ಬಾಯಿ, ಎಸ್ ಎಸ್ ಘಾಟಿ ಪಂಚಾಯಿತಿಯ ಉಪಾಧ್ಯಕ್ಷೇ ಶ್ರೀಮತಿ ಪೂರ್ವ ಪುಷ್ಪ, ಶ್ರೀಮತಿ ಭಾರತಿ ಬಾಯಿ, ಶಾರದ,ರಾಧ ಮೈಲಾರಪ್ಪ, ಗಂಗ ರತ್ನಮ್ಮ, ಹಾಗು ಪರಂಪರೆ (ನೋಂ) ಸಂಸ್ಕೃತಿ ಹಾಗು ಸಾಮಾಜಿಕ ಸಂಸ್ಥೆ ಉಪಾಧ್ಯಕ್ಷ ಮುನಿ ಆಂಜಿನಪ್ಪ, ಕಾರ್ಯದರ್ಶಿ ಆಂಜಿನಮ್ಮ, ಹಾಗೂ ಹಲವಾರು ಕಲಾ ಪೋಷಕರು ಹಾಜರಿದ್ದರು.

