ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಕಾವ್ಯ ಕಾದಂಬರಿ ನಾಟಕಗಳು ಸಮಾಜದಲ್ಲಿರುವ ಅಂಕುಡೊಂಕು , ಅಸಮಾನತೆ , ಅಸ್ಪೃಶ್ಯತೆ, ಕಂದಾಚಾರ , ರೂಢಿ ಸಂಪ್ರದಾಯಗಳನ್ನು ತೊಡೆದು ವೈಚಾರಿಕತೆಯ ಬದುಕನ್ನು ಸಾಗಿಸಲು ದಾರಿದೀಪವಾಗಬೇಕು ಎಂದು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಹಾಗೂ ಜಾನಪದ ತಜ್ಞರಾದ ಡಾ.ಸಿ.,ಶಿವಲಿಂಗಪ್ಪ ಅಭಿಪ್ರಾಯ ಪಟ್ಟರು.
ಪಟ್ಟಣದ ನೆಹರೂ ಮೈದಾನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕ ಕೆ.ಎಂ. ಜಗನ್ನಾಥ್ ಮಾತನಾಡಿ, ಚರಿತ್ರೆ ಇತಿಹಾಸ ಎಂದಿಗೂ ಅಮರವಾಗಿ ಉಳಿಯಬೇಕಾದರೆ ಜನಸಾಮಾನ್ಯರು ತಲುಪುವ ಕಥೆ, ಕವನ, ಕಾದಂಬರಿಗಳನ್ನ ಕಟ್ಟಬೇಕಾಗುತ್ತದೆ . ಈ ನಿಟ್ಟಿನಲ್ಲಿ ಯುವಕವಿಗಳು ಜಾಗೃತ ರಾಗಬೇಕು ಎಂದು ಕಿವಿಮಾತು ಹೇಳಿದರು.
ಕವಿಗೋಷ್ಠಿಯಲ್ಲಿ ಡಾ.ಜೆ. ತಿಮ್ಮರಾಜು, ಬಬ್ಬೂರು ತಿಪ್ಪೀರ ನಾಯಕ, ಗೀತಾ ನಾಗಪ್ಪ, ನಿರ್ಮಲ ಮರಡಿಹಳ್ಳಿ, ಮಾರಿ ಕಣಿವೆ ರಾಮಸ್ವಾಮಿ, ದಿವು ಶಂಕರ್, ಈರಣ್ಣ, ಎಂ. ಕಿರಣ್ ಮಿರಜ್ಕರ್, ಪ್ರಹ್ಲಾದ ಕರಿ ಓಬೇನಹಳ್ಳಿ, ಆರ್. ಶಿವಶಂಕರ್ ಸೀಗೆಹಟ್ಟಿ, ಆರ್. ಎ. ಸ್ವಪ್ನ, ಸರಸ್ವತಿ, ರುದ್ರಸ್ವಾಮಿ ಹರ್ತಿಕೋಟೆ, ಮಂಜುನಾಥ್ ಆಲೂರು, ಸಿ.ಕರಿಯಪ್ಪ ಆಲೂರು, ಶಂಕರ್, ಕೆ ಶಿವಾನಂದ್, ಎಸ್.ಕೆ. ನಾಗರಾಜು ಸಕ್ಕರ, ಹಾಗೂ ಇತರರು ಕವನ ವಾಚನ ಮಾಡಿದರು ಹೆಚ್. ಶಿವಮೂರ್ತಿ ಶಫಿವುಲ್ಲ ಮುದ್ದುರಾಜು ಹಾಗೂ ಇತರರು ಉಪಸ್ಥಿತರಿದ್ದರು.

