ಬೆಂಗಳೂರು ನಡಿಗೆ ಯಾವ ಪುರುಷಾರ್ಥಕ್ಕೆ?

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿಸಿಎಂ ಡಿಕೆ ಶಿವಕುಮಾರ್, ನಿಮಗೆ ಪ್ರಚಾರದ ಹುಚ್ಚು ವಿಪರೀತ ತಲೆಗೇರಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಬೆಳಗ್ಗೆ ಎದ್ದೊಡನೆ ದಿನಪತ್ರಿಕೆಗಳನ್ನು ಒಮ್ಮೆ ನೋಡಿ
, ಜನರ ಸಂಕಷ್ಟ ನಿಮಗೆ ಅರ್ಥ ಆಗಬಹುದೇನೋ!

ಮಳೆಯಿಂದ ಬೆಂಗಳೂರು ಮುಳುಗಿದೆ. ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು ರಸ್ತೆಗಳು ಹಾಳಾಗಿ, ಜನರು ನರಕ ಅನುಭವಿಸುತ್ತಿದ್ದಾರೆ. ಉಸ್ತುವಾರಿ ಸಚಿವರಾಗಿರುವ ನೀವು ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಬೇಕಿತ್ತು, ಅವರಿಗೆ  ಸಾಂತ್ವನ ಹೇಳಿ, ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಬೇಕಿತ್ತು.

- Advertisement - 

ಅದನ್ನು ಬಿಟ್ಟು ನೀವು ಹಳೆ ಬೆಂಗಳೂರು ಪ್ರದೇಶಗಳಲ್ಲಿ ನಡಿಗೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಲಾಲ್ ಬಾಗ್, ಜೆಪಿ ಪಾರ್ಕ್ಕಬ್ಬನ್ ಪಾರ್ಕ್, ಕೋರಮಂಗಲ, ನಾಗರಬಾವಿ, ಕೆ.ಆರ್. ಪುರ ಪಾರ್ಕ್ಗಳಲ್ಲಿ ನಡಿಗೆ ಮಾಡಿದರೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತದೆಯೇ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಬೆಂಗಳೂರಿನಲ್ಲಿ ಜನಸಾಮಾನ್ಯರು ಪಡಬಾರದ ಕಷ್ಟಪಡುತ್ತಿದ್ದಾರೆ. ರಸ್ತೆಗಳು ಯಮಗುಂಡಿಗಳಿಂದ ಕೂಡಿದ್ದು ಜನರನ್ನು ಬಲಿ ಪಡಿಯುತ್ತಿದೆ.  ಒಂದೇ ವಾರದಲ್ಲಿ ಬಿಎಂಟಿಸಿಗೆ ನಾಲ್ವರು ಬಲಿಯಾಗಿದ್ದಾರೆ. ಇವೆಲ್ಲವೂ ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿ!

- Advertisement - 

ಇದೇನಾ ನೀವು ಬೆಂಗಳೂರಿನ ನಾಗರಿಕರಿಗೆ ಸ್ಪಂದಿಸುವ ಪರಿ? ಜನಸ್ನೇಹಿ, ಮಾತೃ ಹೃದಯಿಗಳಿಗಷ್ಟೇ, ಜನಪರ ಆಡಳಿತ ನೀಡಲು ಸಾಧ್ಯ. ಬಂಡೆ ಕಲ್ಲಿನಂತ ಹೃದಯ ಇರುವ ನಿಮಗೆ ಜನರ ಸಂಕಷ್ಟ ಹೇಗೆ ತಾನೆ ಅರ್ಥವಾಗುತ್ತದೆ? ಎಂದು ಜೆಡಿಎಸ್ ಚುಚ್ಚಿ ಟೀಕಿಸಿದೆ.

 

Share This Article
error: Content is protected !!
";