ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಕಡೂರು ತಾಲ್ಲೂಕು ಸಖರಾಯಪಟ್ಟಣದ ಕಣಿವೆ ಆಂಜನೇಯ ಸ್ವಾಮಿ ದೇವಾಲಯ ಸಮೀಪದ ಪ್ಲಾಂಟೇಶನ್‌ನಲ್ಲಿ ಅರಣ್ಯ ರಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಎಂ.ಶರತ್ (೩೩) ಜೂನ್ ೨೪ ರಿಂದ ನಾಪತ್ತೆಯಾಗಿರುವುದಾಗಿ ಅವರ ತಾಯಿ ರತಿ ಭೀಮಯ್ಯ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೂನ್ ೨೭ ರಂದು ಪ್ಲಾಂಟೇಶನ್ ಬಳಿ ಶರತ್ ಧರಿಸುತ್ತಿದ್ದ ಬಟ್ಟೆಗಳು ಪತ್ತೆಯಾಗಿದ್ದು, ಬೈಕ್ ಸಹ ಪಕ್ಕದಲ್ಲೇ ನಿಂತಿದ್ದು, ಅವರನ್ನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಳಿವು ತಿಳಿದಲ್ಲಿ ಕಂಟ್ರೋಲ್ ರೂಂ (೦೮೨೬೨-೨೩೫೬೦೮) ಅಥವಾ ಸಖರಾಯಪಟ್ಟಣ ಠಾಣೆ (೦೮೨೬೭-೨೪೪೦೪೪) ಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಕೋರಿದ್ದಾರೆ.