ಕನ್ನಡಿಗರನ್ನು ಬೇಷರತ್ತಾಗಿ ಕ್ಷಮೆ ಕೇಳಿ :  ಕರವೇ ಒತ್ತಾಯ 

News Desk
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕನ್ನಡ ನಾಡಿನ ಕುರಿತು ಕನ್ನಡಿಗರ ಕುರಿತು ನೆಲ, ಜಲ ಭಾಷೆ, ಗಡಿಯ ವಿಷಯದಲ್ಲಿ ಖ್ಯಾತೆ ತೆಗಿಯುತ್ತಿರುವ ತಮಿಳು ನಾಡಿನ ಕೆಲ ಕೀಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯ ವಿ ಕರವೇ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ಒತ್ತಾಯಿಸಿದರು.
ನಗರದ ತಾಲೂಕು ಕಚೇರಿ ಮುಂಭಾಗ ರಾಜ್ಯ ವಿ-ಕರವೇ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು ತಮಿಳು ಭಾಷೆಯಿಂದ ಕನ್ನಡ ಉದಯವಾಗಿದ್ದು ಎಂಬಾ ಅವಹೇಳನಕಾರಿ ಹೇಳಿಕೆಯನ್ನು ನಟ ಕಮಲ್ ಹಾಸನ್ ನೀಡಿದ್ದಾರೆ  ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ(ರಿ) ಈ ಹೇಳಿಕೆಯನ್ನು ಖಂಡಿಸುತ್ತದೆ. ಈ ಕೂಡಲೇ ನಟ ಕಮಲಹಾಸನ್ ಬೇಷರತ್ತಾಗಿ ಕ್ಷಮೆಯಾಚಿಸಬೇಕು,ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆ ನೀಡಿದ್ದೆ ಆದರೆ ಕರ್ನಾಟಕ ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ಬಿಡುಗಡೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.
 ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಹೆಚ್. ಮಂಜುನಾಥ್ ಮಾತನಾಡಿ, ವರ ನಟ ಡಾ. ರಾಜಕುಮಾರ್ ಅವರ ಪುತ್ರ ಡಾ.ಶಿವರಾಜ್ ಕುಮಾರ್ ರವರ ಮುಂದೆ ಕಮಲ್ ಹಾಸನ್ ಈ ರೀತಿ ಕನ್ನಡದ ಕುರಿತು ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಹರಿಕುಮಾ‌ರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಪ್ರವೀಣ್, ಬಿ.ನಯಾಜ್ ಖಾನ್, ಗಂಗರಾಜು, ಕುಮುದ, ಶಶಿಕಲಾ, ರೇಷ್ಮಾ, ರಾಗಿಣಿ, ಶಾರದಮ್ಮ, ವಿನಯ್, ಕಿರಣ್, ಲಕ್ಷಣ್, ಮಧು, ಚಂದ್ರಶೇಖರಯ್ಯ, ಪಿ‌ರ್ ಪಾಷ ಹಾಜರಿದ್ದರು.

- Advertisement - 
Share This Article
error: Content is protected !!
";