ಹೊಸದುರ್ಗ ತಾಲೂಕಿನ ಕಿಸಾನ್ ಸಂಘದ ನೂತನ ಸಮಿತಿ ರಚನೆ

News Desk

ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಭಾರತೀಯ ಕಿಸಾನ್ ಸಂಘದ ಹೊಸದುರ್ಗ ತಾಲೂಕಿನ ನೂತನ ಸಮಿತಿಯ ರಚನೆಯನ್ನು ನಗರದ ಎಪಿಎಂಸಿ ನಿರೀಕ್ಷಣಾ ಮಂದಿರದಲ್ಲಿ ನಡೆಸಲಾಯಿತು.

ಈ ಸಭೆಗೆ ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಹನುಮಂತಪ್ಪ ನಾಗತಿಹಳ್ಳಿ ಹಾಗೂ ಚುನಾವಣಾಧಿಕಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ ಬಾಗವಹಿಸಿದ್ದರು.

ಈ ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ತಾಲ್ಲೂಕು ಅಧ್ಯಕ್ಷರಾಗಿ ಮಹಾಲಿಂಗಪ್ಪ ಹಾಗಲಕೆರೆ, ಪ್ರಧಾನ  ಕಾರ್ಯದರ್ಶಿಯಾಗಿ ನಾಗೇಂದ್ರ ಅಯ್ಯನಹಳ್ಳಿ, ಸಹ ಕಾರ್ಯದರ್ಶಿ ಇಂಧೂದರ ರಾಮಜ್ಜನಹಳ್ಳಿ, ಉಪಾಧ್ಯಕ್ಷರಾಗಿ ಜಗದೀಶ್ ಗೂಳಿಹಟ್ಟಿ, ಭೈರಪ್ಪ ಕಂಸಾಗರ, ವಿರುಪಾಕ್ಷ ದೇವಪುರ,

ಯುವಪ್ರಮುಖ್ ರಾಗಿ ಮಂಜಪ್ಪ ಹಾಗಲಕೆರೆ, ಮಹಿಳಾ ಪ್ರಮುಖರಾಗಿ ಮಧು ಹುಣನೋಡು, ಕಾರ್ಯಕಾರಿಣಿ ಸದಸ್ಯರಾಗಿ ತಿಮ್ಮಕ್ಕ ಹಾಗಲಕೆರೆ, ರಾಜೇಶ್ವರಿ ಹಾಗಲಕೆರೆ, ಲಕ್ಷ್ಮಣಪ್ಪ, ಜಿ.ವಿನೋದಮ್ಮ ನಗರಗೆರೆ, ವಿದ್ಯಾ ಹೊನ್ನೇನಹಳ್ಳಿ, ತಿಮ್ಮಣ್ಣ ಜಿ, ಚಂದ್ರಪ್ಪ.ಜಿ, ಕೊಂಡಜ್ಜಿ ಮಂಜಣ್ಣ, ಬಸವರಾಜು ಮಾಳಪ್ಪನಹಳ್ಳಿ, ರೇಣುಕಾಪ್ರಸಾದ್ ಇವರನ್ನು ಆಯ್ಕೆ ಮಾಡಲಾಯಿತು.

ಹೊಸದುರ್ಗ ತಾಲೂಕು ಸಮಿತಿ ರಚನೆಗೆ ನೂತನವಾಗಿ ಆಯ್ಕೆಯಾಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಪದಾಧಿಕಾರಿ ಸದಸ್ಯರುಗಳನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ ಅಭಿನಂದಿಸಿದರು.

 

- Advertisement -  - Advertisement -  - Advertisement - 
Share This Article
error: Content is protected !!
";