ಮತಗಳ್ಳತನದ ನಾಟಕ, ಸುಳ್ಳನ್ನು ಬಯಲು ಮಾಡಿದ ಮಾಜಿ ಸಚಿವ ರಾಜಣ್ಣ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಹುಲ್ ಗಾಂಧಿ ಅವರ “ಮತಗಳ್ಳತನ”ದ ನಾಟಕ, ಸುಳ್ಳನ್ನು ಬಯಲು ಮಾಡಿದ ಮಾಜಿ ಸಚಿವ ಕೆ.ಎನ್.ರಾಜಣ್ಣನವರು ಅವರು ಈಗ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣ, ಮುಸ್ಲಿಂ ತುಷ್ಟೀಕರಣದ ಬಗ್ಗೆ ಮತ್ತೊಮ್ಮೆ ಸತ್ಯವನ್ನು ನುಡಿದಿದ್ದಾರೆ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಓಟು ಹಾಕುತ್ತಾರೆ?
ಬಿಜೆಪಿಯನ್ನು ಸೋಲಿಸಲು ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುತ್ತಾರೆಯೇ ಹೊರತು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಓಟು ಹಾಕೋದಿಲ್ಲ.

- Advertisement - 

ಮುಸ್ಲಿಮರಿಗೆ ಬೇರೆ ಆಯ್ಕೆ ಇಲ್ಲ, ಅದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುತ್ತಾರೆ. ನಿಮ್ಮ ಸತ್ಯವಂತಿಕೆಗೆ ಸಚಿವ ಸ್ಥಾನವನ್ನೇ ಕಳೆದುಕೊಳ್ಳುವಂತಹ ದೊಡ್ಡ ಬೆಲೆ ತೆತ್ತಬೇಕಾದ ಪರಿಸ್ಥಿತಿ ಬಂದರೂ ಸಹ ಯಾವುದೇ ಮುಲಾಜಿಲ್ಲದೆ ಸತ್ಯವನ್ನೇ ಹೇಳುವ ನಿಮ್ಮ ನಿಷ್ಠುರತೆ ನಿಜಕ್ಕೂ ಅಭಿನಂದನೀಯ ಕೆ.ಎನ್ ರಾಜಣ್ಣ ಅವರೇ.

ಆದರೆ ನಿಮ್ಮಂತಹವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವೂ ಇಲ್ಲ, ಬೆಲೆಯೂ ಇಲ್ಲ. ಹೈಕಮಾಂಡ್ ಗುಲಾಮರಿಗೆ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಉಳಿಗಾಲ, ಸ್ಥಾನಮಾನ. ಇದು ಕರ್ನಾಟಕದ, ನಮ್ಮ ದೇಶದ ರಾಜಕಾರಣದ ಅತ್ಯಂತ ದೊಡ್ಡ ದುರಂತ ಎಂದು ಅಶೋಕ್ ಆರೋಪಿಸಿದ್ದಾರೆ.

- Advertisement - 

 

Share This Article
error: Content is protected !!
";